ಬಾರೋ ನಮ್ಮ ಮನೆಗೆ ಶ್ರೀ ರಾಘವೇಂದ್ರ
ಬಾರೋ ನಮ್ಮ ಮನೆಗೆ ಶ್ರೀ ರಾಘವೇಂದ್ರ || ಪ ||
ಬಾರೋ ದುಃಖಾಪಹಾರ - ಬಾರೋ ದುರಿತದೂರ
ಬಾರಯ್ಯ ಸನ್ಮಾರ್ಗ ದಾರಿ ತೋರುವ ಗುರು || ಅ ||
ಬಾಲಪ್ರಹ್ಲಾದನಾಗಿ ಖೂಳ ಕಶ್ಯಪುವಿಗೆ
ಲೋಲ ಶ್ರೀ ನರಹರಿ ಕಾಲರೂಪವ ತೋರ್ದೆ || ೧ ||
ವ್ಯಾಸನಿರ್ಮಿತ ಗ್ರಂಥ - ಮಧ್ವಕೃತ ಭಾಷ್ಯವ
ಬೇಸರದೆ ಓದಿ ಮೆರೆವ ವ್ಯಾಸಮುನಿಯೆ || ೨ ||
ಮಂತ್ರಗೃಹದಲಿ ನಿಂತ ಸುಯತಿವರ್ಯ
ಅಂತ ತಿಳಿಯದೊ ನೀ ಅಂತರದೊಳು || ೩ ||
ಭೂತಪ್ರೇತಗಳನು ಘಾತಿಸಿ ಬಿಡುವಂಥ
ಖ್ಯಾತಿಯುತ ಯತಿನಾಥನೆ ತುತಿಸುವೆ || ೪ ||
ಕುಷ್ಟರೋಗಾದಿಗಳು ನಷ್ಟ ಮಾಡುವಂಥ
ಅಷ್ಟಮಹಿಮೆಯುತ ಶ್ರೇಷ್ಠಮುನಿಯೆ || ೫ ||
ಕರೆದರೆ ಬರುವಿಯೆಂಬೋ ಕೀರುತಿ ಕೇಳಿ ನಾ
ಕರೆದೆನೊ ಕರುಣದಿ ಕರ ಪಿಡಿಯೋ || ೬ ||
ಭಕ್ತವತ್ಸಲನೆಂಬ ಬಿರುದಿನಿಂದಾದರಾ
ಸಕ್ತನ ಮೊರೆ ಕೇಳಿ ಮಧ್ವೇಶವಿಠ್ಠಲದಾಸ || ೭ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments