ವೃಂದಾವನ ನೋಡಿರೋ | ಗುರುಗಳ ವೃಂದಾವನ ಪಾಡಿರೋ
ರಾ ಗ - ಕಲ್ಯಾಣಿ : ತಾಳ - ಆದಿತಾಳ
ವೃಂದಾವನ ನೋಡಿರೋ | ಗುರುಗಳ ವೃಂದಾವನ ಪಾಡಿರೋ | ಪ |
ವೃಂದಾವನ ನೋಡಿ ಆನಂದ ಮದವೇರಿ| ಚೆಂದದಿ ದ್ವಾದಶ ಪುಂಡ್ರಾಂಕಿತಗೊಂಬ | ಅ ಪ |
ತುಂಗಭದ್ರಾ ನದಿಯ ತೀರದಲಿ | ಉತ್ತುಂಗ ಮಂಟಪದ ಮಧ್ಯದಿ |
ಶೃಂಗಾರ ತುಳಸಿ ಶ್ರೀಪದ್ಮಾಕ್ಷಸರಗಳಿಂದ ಮಂಗಳಕರ ಮಹಾ ಮಹಿಮೆಯಿಂದೊಪ್ಪುವ | ೧ |
ದೇಶ ದೇಶದಿ ಮೆಚ್ಚುತ | ಇಲ್ಲಿಗೆ ಬಂದು ವಾಸವಾಗಿ ಸೇವಿಪ |
ಭಾಷೆ ಕೊಟ್ಟಂದದಿ ಬಹುವಿಧವರಗಳ | ಸೂಸುವ ವರಮಹಾ ಮಹಿಮೆಂದೊಪ್ಪುವ | ೨ |
ನಿತ್ಯ ಸನ್ನಿಧಿ ಸೇವಿಪ | ಭಕ್ತರಿಗೆಲ್ಲ ಮತ್ತೆ ಅಭೀಷ್ಟವ ಕೊಡುವ |
ಸತ್ಯದಿ ಗುಣಸಿಂಧು ವೆಂಕಟವಿಟ್ಠಲನ| ನಿತ್ಯ ಸನ್ನಿಧಿಯಿ೦ದ ನಿರುತ ಪೂಜೆಯಗೊಂಬ | ೩ |
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments