ಆ ವೆಂಕಟಗಿರಿನಿಲಯನಂಘ್ರಿ
--ರಾಗ ಶಂಕರಾಭರಣ (ಭೈರವಿ) ಆದಿತಾಳ(ಧುಮಾಳಿ)
ಆ ವೆಂಕಟಗಿರಿನಿಲಯನಂಘ್ರಿ ರಾ-
ಜೀವಯುಗ್ಮಗಳಿಗೆ ನಮಿಸುವೆನು ||ಪ||
ಸೇವಿಪ ಜನರಿಗಮರತರುವೆನಿಸಿ ಧ-
ರಾವಲಯಾಖ್ಯ ದಿವಿಯೊಳೆಸೆವ ||ಅ.ಪ||
ಆವನಂಘ್ರಿಜಲ ಸಕಲ ಜಗತ್ತಿಗೆ
ಪಾವನಕರವೆಂದೆನಿಸುವದು
ಶ್ರೀವಿಧಿಭವ ಶಕ್ರಾದ್ಯರು ಅವನ
ಸೇವಕಸೇವಕರೆನಿಸುವರು ||೧||
ದೇವೋತ್ತಮ ತಾನಾಗಿ ನಿಖಿಲ ಜಡ
ಜೀವ ಭಿನ್ನ ಕರ್ಮವ ಮಾಳ್ಪ
ಸ್ಥಾವರ ಜಂಗಮರೊಳಗೆ ನೆಲೆಸಿ ವೇ-
ದಾವಳಿಯಿಂದ ಸ್ತುತಿಸಿಕೊಂಬ ||೨||
ಮಾತರಿಶ್ವನೊಡನಹಿಪನೊರೆದ ಸ-
ತ್ವಾತಿಶಯವ ತೋರೆನುತಾಗ
ಜಾತರೂಪ ಶೈಲಾತ್ಮಜನೊಪ್ಪಿರೆ
ವೀತಿಹೋತ್ರ ಸಖ ಕಿತ್ತೊಗೆಯ ||೩||
ಪೀತಕರ್ಣನಳವಳಿದು ಸ್ತುತಿಸೆ ನಿ-
ಕೇತನತ್ರಯವ ನಿಳಿದು ಬೇಗ
ಧಾತ ಮಹಿಳೆ ತೀರ್ಥದಿ ಲಕುಮಿಸ-
ಮೇತನಾಗಿ ಮೋದಿಸುತಿಪ್ಪ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಆ ವೆಂಕಟಗಿರಿನಿಲಯನಂಘ್ರಿ
- Log in to post comments