ಕನಕದಾಸರ ಕೀರ್ತನೆಗಳು ಮತ್ತು ಅದರ ತಾತ್ಪರ್ಯ ಇಂದಿಗೂ ಪ್ರಸ್ತುತ

ಕನಕದಾಸರ ಕೀರ್ತನೆಗಳು ಮತ್ತು ಅದರ ತಾತ್ಪರ್ಯ ಇಂದಿಗೂ ಪ್ರಸ್ತುತ

ಕನಕದಾಸರು ಇಂದಿನವರಲ್ಲ. ಅವರು ವಿಜಯನಗರ ಸಾಮ್ರಾಜ್ಯದ ಪತನವನ್ನು ಕಂಡವರು. ಸ್ವತಹ ಅಧಿಕಾರಿಯಾಗಿ, ಪಾಳೆಯಗಾರರಾಗಿ ಧನಸಂಪತ್ತು ಗಳಿಸಿ ಅನುಭವಿಸಿದವರು, ವೈರಾಗ್ಯಬಂದು ಎಲ್ಲವನ್ನು ತ್ಯಜಿಸಿ ತಿಮ್ಮಪ್ಪ ಕನಕನಾಯಕರಾಗಿದ್ದವರು, ಹರಿದಾಸರಾಗಿ, ಕನಕದಾಸರಾದರು. ಅಂದಿನಿಂದ ತಮ್ಮ ಉಳಿದ ಜೀವಿತಕಾಲದಲ್ಲಿ ಹಲವಾರು ದೇವರಕೀರ್ತನೆ, ಸಂಭಾಷಣೆ ರೂಪದ ರಾಮಧ್ಯಾನ ಚರಿತೆ, ನಳದಮಯಂತಿಯವರ ಪ್ರೇಮಕಥನ, ಹರಿಭಕ್ತಿಸಾರ ಮುಂತಾದ ಕಾವ್ಯಗಳನ್ನು ರಚಿಸಿದವರು. ಇವುಗಳಲ್ಲೆಲ್ಲಾ ಕಾಣುವುದು ಭಕ್ತಿ, ವೈರಾಗ್ಯ ಮತ್ತು ವಿನಯಶೀಲತೆ. ಕನಕರ ಮುಂಡಿಗೆಗಳೆಂದು ಇವುಗಳಿಗೆ ಹೇಳುತ್ತಾರೆ. ಇವುಗಳನ್ನು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟವೇ. ನಮ್ಮ ಬುದ್ಧಿಶಕ್ತಿಗೆ, ತಿಳುವಿಕೆಗೆ ಸವಾಲೊಡ್ಡುತ್ತವೆ. ಮಾತ್ರವಲ್ಲ ಅದರಲ್ಲಿರುವ ಸಾರವು ಇವತ್ತಿನ ಜನರ ಜೀವನ ಶೈಲಿಗೆ ಪೂರಕವಾಗಿದೆ ಎಂದು ಹೇಳುತ್ತಾರೆ ಕನಕದಾಸರ ಕೀರ್ತನೆಗಳ ಸಂಪಾದಕ-ಹೊ.ರಾ. ಸತ್ಯನಾರಾಯಣ ರಾವ್. ಅಹುದಾದರಹುದೆನ್ನಿ, ಅಲ್ಲವಾದರಲ್ಲವೆನ್ನಿ. --------- ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ ಬಹುಜನರುನೆಲೆ ತಿಳಿದು ಪೇಳಿ ಮತ್ತಿದನು. ದೇವರಿಲ್ಲದ ಗುಡಿಯು ಪಾಳು ಬಿದ್ದಂಗಡಿಯು ಭಾವವಿಲ್ಲದ ಭಕುತಿ ಅದು ಕುಹಕ ಯುಕುತಿ ಹೇವವಿಲ್ಲದ ಹೆಣ್ಣು ಗಜುಗ ಬೆಳೆದಾ ಕಣ್ಣು ಸೇವೆಯರಿಯದ ಧಣಿಯು ಕಲ್ಲಿನಾ ಖಣಿಯು. ಧರ್ಮವಿಲ್ಲದ ಅರಸು ಮುರಿದ ಕಾಲಿನ ಹೊರಸು ನಿರ್ಮಲಿಲ್ಲದ ಮನಸು ಅದು ಕಜ್ಜಿ ತಿನಿಸು ಕರ್ಮವಿಲ್ಲದ ಗಂಡು ಕರಿಯ ಓನಕೆಯ ತುಂಡು ಮರ್ಮವಿಲ್ಲದ ಮಾತು ಒಡಕು ಮಡಕೆಯ ತೂತು. ................................... (ಇದನ್ನು ನಾನು ಒಪ್ಪಲ್ಲಾ ಅದಕ್ಕೆ ಹಾಕಿಲ್ಲಾ!) ಸೌಖ್ಯವಿಲ್ಲದ ಕೂಟ ಅದು ಕಾಳಕೂಟ ಒಕ್ಕಲಿಲ್ಲದ ಊರು ಕೊಳೆತು ನಾರುವ ನೀರು ಸೊಕ್ಕಿ ನಡೆಯುವ ಭೃತ್ಯ ಅವ ಕ್ರೂರಕೃತ್ಯ ಕಂಡುಕರೆಯದ ನೆಂಟ ಮೊನೆ ಕೆಟ್ಟಿಹ ಕಂಟ ಉಂಡು ನಗದಿಹ ಮೋರೆ ಅದು ಕಹಿಯ ಸೋರೆ ದಂಡಿಗಂಜುವ ಬಂಟ ಒಡಕು ಹರವಿಯ ಕಂಠ ಗಂಡುಗಂಜದ ನಾರಿ ಅವಳೆ ಹೆಮ್ಮಾರಿ. ಬಿಟ್ಟು ನಡೆಯುವ ಗೆಣೆಯು ಹರಕು ತೊಗಲಿನ ಮಿಣಿಯು ಕೊಟ್ಟು ಕೇಳುವ ದಾತ ಅವ ಹೀನಜಾತ ಸೃಷ್ಟಿಯೊಳು ಕಾಗಿನೆಲೆಯಾದಿ ಕೇಶವನಂಘ್ರಿ ಮುಟ್ಟಿ ಭಜಿಸದ ನರನು ಅವನು ಕಾಡುಮರನು. ಇನ್ನೂ ಇಂತವು ಹಲವಿವೆ. ಅದನ್ನು ಇನ್ನೊಮ್ಮೆ.
ದಾಸ ಸಾಹಿತ್ಯ ಪ್ರಕಾರ
ಬರೆದವರು