ರಾಮ ರಾಮ ಎಂಬೆರಡಕ್ಷರ

ರಾಮ ರಾಮ ಎಂಬೆರಡಕ್ಷರ

ರಾಗ - ಧನ್ಯಾಸಿ ತಾಳ - ಆದಿ ರಾಮ ರಾಮ ಎಂಬೆರಡಕ್ಷರ ಪ್ರೇಮದಿ ಸಲಹಿತು ಸುಜನರನು ||ಪಲ್ಲವಿ|| ಹಾಲಾಹಲವನು ಪಾನವ ಮಾಡಿದ| ಫಾಲಲೋಚನನೆ ಬಲ್ಲವನು || ಆಲಾಪಿಸುತ ಶಿಲೆಯಾಗಿದ್ದ | ಬಾಲೆ ಅಹಲ್ಯೆಯ ಕೇಳೇನು ||೧|| ಅಂಜಿಕೆ ಇಲ್ಲದೆ ಗಿರಿ ಸಾರಿದ ಕಪಿ| ಕುಂಜರ ರವಿಸುತ ಬಲ್ಲವನು || ಎಂಜಲ ಫಲಗಳ ಹರಿಗರ್ಪಿಸಿದ | ಕಂಜಲೋಚನೆಯ ಕೇಳೇನು ||೨|| ಕಾಲವನರಿತು ಸೇವೆಯ ಮಾಡಿದ | ಲೋಲ ಲಕ್ಷ್ಮಣನೆ ಬಲ್ಲವನು || ವ್ಯಾಳ ಶಯನ ಶ್ರೀ ವಿಜಯವಿಠಲನ | ಲೀಲೆ ಶರಧಿಯ ಕೇಳೇನು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ