ಭಾರತಿ ಭಕುತಿಯನು ಕೊಡುವದು
ರಾಗ: ಸುರಟಿ ಆದಿತಾಳ
ಭಾರತಿ ಭಕುತಿಯನು ಕೊಡುವದು ಮಾರುತ ಸತಿ ನೀನು ||ಪ||
ಮೂರು ಲೋಕದೊಳಗಾರು ನಿನಗೆ ಸರಿ | ಮಾರಾರಿಗಳಿಂದಾರಾಧಿತಳೆ ||ಅ. ಪ||
ವಾಣಿ ಎನ್ನ ವದನದಲ್ಲಿಡು ಮಾಣದೆ ಹರಿಸ್ತವನ| ವೀಣಾಧೃತ ಸುಜ್ಞಾನಿಯೆ
ಪಂಕಜ | ಪಾಣಿಯೇ ಕೋಕಿಲ ವಾಣಿಯೇ ಪಾಲಿಸೆ
ಸುಂದರಿ ಶುಭಕಾರಿ ಸುಮನಸ ವೃಂದ ಶೋಭಿತ ಕಬರಿ||
ಮಂದಹಾಸ ಮುಖದಿಂದ ನೋಡಿ ನಿನ್ನ ಕಂದನೆಂದು ಎನ್ನ ಮುಂದಕೆ ಕರೆಯೆ
ಮಂಗಳಾಂಗಿ ಎನ್ನ ಅಂತರಂಗದಲ್ಲಿಡು ಮುನ್ನ | ತುಂಗ ವಿಕ್ರಮ
ತಂದೆ ಗೋಪಾಲ ವಿಠ್ಠಲನ | ಹಿಂಗದೆ ನೆನೆವ ಸುಖಂಗಳ ನೀಡೆ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments