ಅಳುವೊದ್ಯಾತಕೊ ರಂಗ
ರಾಗ: ಭೈರವಿ ಆದಿ ತಾಳ
ಅಳುವದ್ಯಾತಕೊ ರಂಗಾ | ಅತ್ತರಂಜಿಸುವ ಗುಮ್ಮಾ |ಪ|
ಪುಟ್ಟಿದೇಳು ದಿವಸದಲ್ಲಿ | ದುಷ್ಟ ಪೂತನಿಯ ಕೊಂದಿ |
ಮುಟ್ಟಿ ಮೊಲೆಯ ಹಾಲುಂಡ ಕಾರಣ | ದೃಷ್ಟಿ ತಾಕಿತೆ ನಿನಗೆ ಕಂದಯ್ಯ
ಬಾಲಕತನದಲ್ಲಿ ಗೋ | ಪಾಲರೊಡಗೂಡಿ
ಕಾಳಿಂಗ ಮಡುವನು ಕಲಕಿದ ಕಾರಣ | ಕಾಲು ಉಳುಕಿತೇ ನಿನಗೆ ರಂಗಯ್ಯ
ತುರುವ ಕಾಯಲು ಪೋಗಿ | ಭರದಿಂದ ಮಳೆಗೆರೆಯೆ
ಬೆರಳಲ್ಲಿ ಬೆಟ್ಟವನೆತ್ತಿದ ಕಾರಣ | ಬೆರಳು ಉಳುಕಿತೇ ನಿನಗೆ ಕಂದಯ್ಯ
ವಸುದೇವ ಸುತನಾಗಿ | ಅಸುರರ ಮರ್ದಿಸಿದೆ
ಬಸುರಲಿ ಬೊಮ್ಮನ ಪಡೆದ ಕಾರಣ | ಕಿಸರು ತಾಕಿತೆ ನಿನಗೆ ರಂಗಯ್ಯ
ಶರಣು ವೇಲಾಪುರದ | ಚೆಲುವ ಚೆನ್ನಿಗರಾಯ |
ಶರಣರ ಸಲಹುವ ದೊರೆ ನೀನಲ್ಲವೆ | ವರದ ಪುರಂದರ ವಿಠಲ ಗೋವಿಂದ
(ಕರ್ನಾಟಕ ಭಕ್ತ ವಿಜಯ ಪುಸ್ತಕದಿಂದ)
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments