ರಂಗ ಕೊಳಲಲೂದಲಾಗಿ
ರಂಗ ಕೊಳಲನೂದಲಾಗಿ. ರಾಗ: ಆರಭಿ. ಏಕ ತಾಳ.
ಪಲ್ಲವಿ:
ರಂಗ ಕೊಳಲನೂದಲಾಗಿ ಮಂಗಳಮಯವಾಯಿತು ಧರೆ
ಜಗಂಗಳು ಚೈತನ್ಯ ಮರೆದು ಅಂಗ ಪರವಶವಾದುವು
ಚರಣ
1:
ತೀಡಿದ ಮಾರುತ ಮಂದಗತಿಗೈದ ಪಾಡಿದ ಅಲರು ಬಲ ಗೊಂಚಲು ಬಿಡೆ
ಪಾಡಲೊಲ್ಲವಳಿ ಕುಲಗಳು ಪಾಡಿದ ಮಾಮರ ಚಿಗುರೊಡೆಯದು
ಹೇಡಿ ಕೊಂಡವು ಜಾಣ್ವಕ್ಕಿ ಗಿಳೀ ಮಾತಾಡದೆ ಕಳೆ ಕುಂದಿದುವು ಕೋಗಿಲೆ
ಓಡಾಟ ವೈರಾಟ ಬಿಟ್ಟು ಖಗ ಮೃಗ ಕಾಠ ನಿದ್ರಾ ವಶವಾದುವು
2:
ತಳದುದಕ ಉಕ್ಕೇರಿ ಬಂದುವು ತುಳುಕಿ ಚೆಲ್ಲಾಡಿ ನಿಂದಳೇ ಯಮುನೆ
ಮೇಲೆ ಮೇಲೋಡಿ ಮೇಘಾಳಿ ಧಾರಿಟ್ಟುವು ಕಲ್ಲು ಕರಗಿ ನೀರಾದುವು
ನಳಿನ ಚಂಪಕ ನಾಗ ಪುನ್ನಾಗ ಪಾಟಲ ಶಾವಂತಿಗೆ ಕುಂದ ಬಕುಳವು
ಮಾಲತಿ ಜಾಜಿ ಪರಿಮಳ ಕೂಡಿತು ನೀಲಾಂಗನಂಘ್ರಿಗೆರಗಿದವು
3:
ಮುದ್ದು ಮೋಹನನ ಮಂಜುಳ ಸಂಗೀತ ಸದ್ದನಾಲಿಸಿ ಗೋಪಾಂಗನೆಯರೆಲ್ಲ
ಬುದ್ಧಿ ಸೂರಾಡಿ ಆನಂದ ವಾರಿಧಿಯಲ್ಲಿ ಬಿದ್ದು ಪರವಶರಾದರು
ಸಿದ್ಧ ಮುನಿಜನರಿದ್ದ ಸಮಾಧಿಯೊಳೆದ್ದು ಕುಣಿದರು ಎದುರೆದುರಾಗಿ
ಕದ್ದುಗೆಯ ರಸನೋಲೈಸಿ ಕೊಂಡರು ಗೆದ್ದರು ಭವ ಸಮುದ್ರವ
4:
ಕೆಚ್ಚಲು ಬಿಗಿದು ತೊರೆಯಲು ಮೊಲೆಯು ವತ್ಸಗಳೊಡಲಾಸೆಯು ತೊರೆದೆಳೆಹುಲ್ಲ
ಕಚ್ಚಿರಲ್ಲಲ್ಲಿ ನಿಂದುವು ಗೋವ್ಗಳು ಪುಚ್ಛವ ನೆಗಹಿ ನೀಂಟಿಸಿ
ಅಚ್ಯುತನಾಕೃತಿ ನೋಡಲು ಸುರರಿಗೆ ಆಶ್ಚರ್ಯವಾಯಿತು ನಾವು ಕಂಡೆವೆಂದು
ಮೆಚ್ಚಿ ಮುಕುಂದನ ಲೀಲಾವಿನೋದಕೆ ಹೆಚ್ಚಿನ ಕುಸುಮವ ಸುರಿದರು
5:
ಶ್ರೀ ಮನೋಹರ ಗೋಪಾಲ ಮೂರುತಿ ಆ ಮಧುಕುಂಜ ವನದಿ ತ್ರಿಭಂಗಿಲಿ
ಹೇಮಾಂಬರವುಟ್ಟು ಸುಗಂಧ ಕಸ್ತೂರಿ ನಾಮ ಮಕುಟದ ಬೆಳಗಿನಲಿ
ಧಾಮ ವನಮಾಲೆ ಬಹಿರ್ಭೂಶಿತ ಸ್ವಾಮಿ ಪುರಂದರ ವಿಟ್ಠಲರಾಯನು
ರಾಮಕ್ರಿಯ ಮೇಘರಂಜನಿ ಪಾಡೆ ಸಾಮವೇದ ನಮೋ ನಮೋ ಎನ್ನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments