ಕೂಸಿನ ಕಂಡೀರಾ - ಸುಪ್ರಹ್ಲಾದನ ಕಂಡೀರಾ

ಕೂಸಿನ ಕಂಡೀರಾ - ಸುಪ್ರಹ್ಲಾದನ ಕಂಡೀರಾ

ಕೂಸಿನ ಕಂಡೀರಾ - ಸುಪ್ರಹ್ಲಾದನ ಕಂಡೀರಾ || ಪ || ರಾಕ್ಷಸ ಕುಲದಲಿ ಜನಿಸಿತು ಕೂಸು ರಾಧಾಕೃಷ್ಣನ ಭಜಿಸಿತು ಕೂಸು ರಾಗದ್ವೇಷಗಳ ಬಿಟ್ಟಿತು ಕೂಸು ರಾಮನ ಪಾದವ ನೆನೆಯುವ ಕೂಸು || ೧ || ಘನಹರಿ ಕಂಭದಿ ತೋರಿತು ಕೂಸು ಗಳಿಸಿತು ಕೃಷ್ಣನ ಪ್ರೇಮವ ಕೂಸು ಘನಮಂತ್ರಾಲಯದಿ ವಾಸಿಪ ಕೂಸು ವೇಣುಗೋಪಾಲನ ಪ್ರೀತಿಯ ಕೂಸು || ೨ || ಪ್ರಸಿಧ್ಧ ವ್ಯಾಸರಾಯರೆಂಬೊ ಕೂಸು ಪ್ರವೀಣ ವಿದ್ಯೆಯೊಳೆನಿಸಿದ ಕೂಸು ಪ್ರಹ್ಲಾದನೆಂಬೊ ಆಹ್ಲಾದ ಕೂಸು ಪ್ರಸನ್ನ ಮಧ್ವೇಶವಿಠ್ಠಲನ ಕೂಸು || ೩ ||
ದಾಸ ಸಾಹಿತ್ಯ ಪ್ರಕಾರ
ಬರೆದವರು