ಬಾರೋ ಗುರು ರಾಘವೇಂದ್ರ
ರಾ ಗ - ಮಧ್ಯಮಾವತಿ : ತಾಳ - ಅಟ್ಟತಾಳ
ಬಾರೋ ಗುರು ರಾಘವೇಂದ್ರ | ಬಾರಯ್ಯ ಬಾ ಬಾ ಬಾರೋ ಗುರು ರಾಘವೇಂದ್ರ | ಪ |
ಹಿಂದು ಮುಂದಿಲ್ಲೆನಗೆ ನೀ ಗತಿ ಎಂದು ನಂಬಿದೆ ನಿನ್ನ ಪಾದವ |
ಬಂಧನವ ಬಿಡಿಸೆನ್ನ ಕರಪಿಡಿ ನಂದಕಂದ ಮುಕುಂದ ಬಂಧು | ಅ | ಪ |
ಸೇವಕನೆಲವೋ ನಾನು | ಧಾವಿಸಿ ಬಂದೆನು | ಸೇವೆಯ ನೀಡೋ ನೀನು |
ಸೇವಕನ ಸೇವೆಯನು ಸೇವಿಸಿ | ಸೇವ್ಯ ಸೇವಕ ಭಾವವೀಯುತ |
ಠಾವುಗಾಣಿಸಿ ಪೊರೆಯೊ ಧರೆಯೊಳು | ಪಾವನಾತ್ಮಕ ಕಾವ ಕರುಣಿ | ೧ |
ಕರೆದರೆ ಬರುವಿಯೆಂದು | ಸಾರುವುದು ಡಂಗುರ | ತ್ವರಿತದಿ ಒದಗೋ ಬಂದು |
ಜರಿಯ ಬೇಡವೊ ಬರಿದೆ ನಿನ್ನಯ | ವಿರಹ ತಾಳದೆ ಮನದಿ ಕೊರಗುವೆ |
ನಿರುತ ಹರಿಯ ಸ್ಮರಣೆಯ ಎನಗ್ಹರುಷದಲಿ ನೀ ನಿರುತ ಕೊಡುತಲಿ | ೨ |
ನರಹರಿ ಪ್ರಿಯನೇ ಬಾ | ಗುರು ಶ್ರೀಶವಿಟ್ಠಲನ ಕರುಣಾಪಾತ್ರನೇ ಬೇಗ ಬಾ |
ಗುರುವರನೆ ಪರಿಪೋಷಿಸೆನ್ನನು | ಮರೆಯದಲೆ ತವ ಶರಣ ಕೋಟಿಯ- |
ಲಿರಿಸಿ ಚರಣಾಂಬುಜವ ತೋರುತ ತ್ವರಿತದಲಿ ಓಡೋಡಿ ಬಾ ಬಾ | ೩ |
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments