ಮನವ ನಿಲಿಸುವದು ಬಹು ಕಷ್ಟ
(ರಾಗ ನಾದನಾಮಕ್ರಿಯ ಆದಿ ತಾಳ )
ಮನವ ನಿಲಿಸುವದು ಬಹು ಕಷ್ಟ, ಹರಿದಾಡುವಂಥ
ಮನವ ನಿಲಿಸುವದು ಬಹು ಕಷ್ಟ ||ಪ||
ಕಾಶಿಗ್ಹೋಗಲುಬಹುದು
ದೇಶ ತಿರುಗಲುಬಹುದು
ಆಸೆ ಸುಟ್ಟಂತೆ ಇರಬಹುದು ||೧||
ಜಪವ ಮಾಡಲುಬಹುದು
ತಪವ ಮಾಡಲುಬಹುದು
ಉಪವಾಸ ವ್ರತದಲ್ಲಿರಬಹುದು ||೨||
ಸ್ನಾನ ಮಾಡಲುಬಹುದು
ಮೌನ ಮಾಡಲುಬಹುದು
ಧ್ಯಾನದಿಪುರಂದರವಿಠಲನ ಚರಣದಲಿ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments
ಪವಮಾನ ಜಗದ ಪ್ರಾಣ
In reply to ಪವಮಾನ ಜಗದ ಪ್ರಾಣ by kamalap09
Re: ಪವಮಾನ ಜಗದ ಪ್ರಾಣ
In reply to Re: ಪವಮಾನ ಜಗದ ಪ್ರಾಣ by shreekant.mishrikoti
Re: ಪವಮಾನ ಜಗದ ಪ್ರಾಣ
In reply to Re: ಪವಮಾನ ಜಗದ ಪ್ರಾಣ by nkumar
Re: ಪವಮಾನ ಜಗದ ಪ್ರಾಣ