ನೋವುಗಳ ತಾಳಲಾರೆ ನೊಂದುಕೊಂಡು ಇರಲಾರೆ
( ಸೌರಾಷ್ಟ್ರ ರಾಗ ಆದಿತಾಳ)
ನೋವುಗಳ ತಾಳಲಾರೆ ನೊಂದುಕೊಂಡು ಇರಲಾರೆ
ಕಾವುದಯ್ಯ ವೇಂಕಟೇಶ ಕರುಣದಿಂದೆನ್ನ ||ಪ||
ಕಣ್ಣಿಗೆ ಕಾಣದ ನೋವು ಹುಣ್ಣುಗಳಿಲ್ಲದ ನೋವು
ಬಣ್ಣವು ಮಾಸಿದ ನೋವು ಬಲುಹಾದ ನೋವು
ಎಣ್ಣಿಮೆಯಿಲ್ಲದ ನೋವು ಎಣಿಕೆಗೊಳ್ಳದ ನೋವು
ಬಣ್ಣನೆಯ ನುಡಿಯ ನೋವು ಬಂದೀತು ನೋವು ||೧||
ದುಷ್ಟರಿಂದ ನೊಂದ ನೋವು ಹೊಟ್ಟೆಯೊಳ್ಹುಟ್ಟಿದ ನೋವು
ಕಷ್ಟಗಳ ಬಿಟ್ಟ ನೋವು ಕಡುಹಾದ ನೋವು
ನಿಷ್ಠುರದ ನುಡಿಯ ನೋವು ನಿಂದೆಯ ಮಾತಿನ ನೋವು
ಇಷ್ಟರು ಇಲ್ಲದ ನೋವು ಇಂತಾದ ನೋವು||೨||
ಬಡವನಾಗಿಹ ನೋವು ಒಡೇಯರಿಲ್ಲದ ನೋವು
ಕೆಡುಗರ ನುಡಿಯ ನೋವು ಕೆಟ್ಟಿಹ ನೋವು
ಪಡೆದ ಕರ್ಮದ ನೋವು ಪಾಪವೆಂಬುದು ನೋವು
ಕಡೆಯ ಕಾಲದ ನೋವು ಕಾಳಾಹಿ ನೋವು ||೩||
ವಿದ್ಯೆಯಿಲ್ಲದ ನೋವು ಬುದ್ಧಿ ಕೆಟ್ಟಿಹ ನೋವು
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ನೋವುಗಳ ತಾಳಲಾರೆ ನೊಂದುಕೊಂಡು ಇರಲಾರೆ
- Log in to post comments