ಕೋಲು ಕೋಲೆನ್ನ ಕೋಲೆ (ದಶಾವತಾರ ಕೋಲಿನ ಪದ)
(ಮಾಂಡ್ ರಾಗ ಕೇರವಾ ತಾಳ)
ಕೋಲು ಕೋಲೆನ್ನ ಕೋಲೆ
ಕೋಲು ಕೋಲೆನ್ನ ಕೋಲೆ
ಕೋಲೆ ಶ್ರೀಗುರುವಿನಾ ಬಲಗೊಂಬೆ ಕೋಲೆ ||ಪ||
ಶಿಕ್ಷಿಸಿ ನಿಗಮಗೋಚರ ರಾಕ್ಷಸನಾ ಕೊಂದು
ರಕ್ಷಿಸಿ ವೇದವನುಳುಹಿದ ಕ್ಷಿತಿಯೊಳು
ರಕ್ಷಿಸಿ ವೇದವನುಳುಹಿದ ಕ್ಷಿತಿಯೊಳು
ಮತ್ಸ್ಯಾವತಾರನ ಬಲಗೊಂಬೆ ಕೋಲೆ ||೧||
ಧರ್ಮ ನಡೆಯಲಾಗಿ ಮರ್ಮವ ತಾಳಿದ
ಕರ್ಮಹರ ಶ್ರೀಮೂರ್ತಿಯ ಕೋಲೆ
ಕರ್ಮಹರ ಶ್ರೀಮೂರ್ತಿಯು ಧರೆಯ ಪೊತ್ತ
ಕೂರ್ಮಾವತಾನ ಬಲಗೊಂಬೆ ಕೋಲೆ ||೨||
ಧರೆಯ ಕದ್ದಸುರನಾ ಕೋರೆದಾಡಿಂದ ಸೀಳಿ
ಹೋರಿಹೊಯಿದಾಡಿದ ನರಹರಿ ಕೋಲೆ
ಹೋರಿಹೊಯಿದಾಡಿದ ನರಹರಿ ಧರೆಯಾ ಗೆದ್ದ
ವರಹಾವತಾರನ ಬಲಗೊಂಬೆ ಕೋಲೆ ||೩||
ತರಳ ಪ್ರಹ್ಲಾದಗಾಗಿ ದುರುಳದೈತ್ಯನ ಕೊಂದು
ಕರುಳ್ ವನಮಾಲೆಯ ಧರಿಸಿದ ಕೋಲೆ
ಕರುಳ್ ವನಮಾಲೆಯ ಧರಿಸಿದಾ ಹರಿ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Read more about ಕೋಲು ಕೋಲೆನ್ನ ಕೋಲೆ (ದಶಾವತಾರ ಕೋಲಿನ ಪದ)
- Log in to post comments