ರೋಗ ಹರನೆ ಕೃಪಾಸಾಗರ ಶ್ರೀಗುರು ರಾಘವೇಂದ್ರ ಪರಿಪಾಲಿಸೊ

ರೋಗ ಹರನೆ ಕೃಪಾಸಾಗರ ಶ್ರೀಗುರು ರಾಘವೇಂದ್ರ ಪರಿಪಾಲಿಸೊ

ರಾ ಗ - ದೇಸ್ : ತಾಳ - ಆದಿತಾಳ ರೋಗ ಹರನೆ ಕೃಪಾಸಾಗರ ಶ್ರೀಗುರು ರಾಘವೇಂದ್ರ ಪರಿಪಾಲಿಸೊ | ಪ | ಸಂತತ ದುರ್ವಾದಿಧ್ವಾಂತ ದಿವಾಕರ | ಸಂತ ವಿನುತ ಮಾತ ಲಾಲಿಸೊ | ೧ | ಪಾವನಗಾತ್ರ ಸುದೇವವರನೆ | ತವಸೇವಕಜನರೊಳಗಾಡಿಸೊ | ೨ | ಘನ್ನಮಹಿಮ ಜಗನ್ನಾಥವಿಟ್ಠಲಪ್ರಿಯ | ನಿನ್ನಾರಧನೆ ಮಾಡಿಸೊ | ೩ |
ದಾಸ ಸಾಹಿತ್ಯ ಪ್ರಕಾರ
ಬರೆದವರು