ಬಂದಾನು ರಾಘವೇಂದ್ರ, ಇಂದಿಲ್ಲಿಗೆ

ಬಂದಾನು ರಾಘವೇಂದ್ರ, ಇಂದಿಲ್ಲಿಗೆ

ರಾ ಗ - ಹಿ ದೂಸ್ಥಾನಿ ಕಾಪಿ : ತಾಳ - ಆದಿತಾಳ ಬಂದಾನು ರಾಘವೇಂದ್ರ, ಇಂದಿಲ್ಲಿಗೆ | ಪ | ಕಂದನ ಮೊರೆಕೇಳಿ ಜನನಿಯು ಬರುವಂತೆ | ಅ ಪ | ಗಜವೇರಿ ಬಂದ, ಜಗದಿ ತಾ ನಿಂದಾ | ಅಜಪಿತ ರಾಮನ, ಪದಾಬ್ಜ ಸ್ಮರಿಸುತಲಿ | ೧ | ಹರಿಯ ಕುಣಿಸುತ ಬಂದ, ನರಹರಿ ಪ್ರಿಯ ಬಂದಾ | ಶರಾಣಾಗತರನು ಕರವಪಿಡಿವೆನೆಂದು | ೨ | ಪ್ರಲ್ಹಾದ ವ್ಯಾಸಮುನೀಂದ್ರ, ರಾಘವೇಂದ್ರ | ನಿಲಿಸುತ ಮನವ ಮಧ್ವೇಶವಿಟ್ಠಲನಲ್ಲಿ | ೩ |
ದಾಸ ಸಾಹಿತ್ಯ ಪ್ರಕಾರ
ಬರೆದವರು