ಸೇವಕತನದ ರುಚಿಯನೇರಿದ್ಯೋ ಹನುಮ...

ಸೇವಕತನದ ರುಚಿಯನೇರಿದ್ಯೋ ಹನುಮ...

ಶ್ರೀರಾಗ - ಆದಿತಾಳ ಸೇವಕತನದ ರುಚಿಯೇನರಿದ್ಯೋ | ದೇವ ಹನುಮರಾಯ | ವೈರಾಗ್ಯ ಬೇಡಿದೆ|| ಉದಧಿಯ ದಾಟಿ ಸೀತೆಯ ಕ್ಷೇಮ ತಂದಾಗ ಮದುವೆಯ ಮಾಡೆನ್ನ ಬಾರದಿತ್ತೇ ಪದದಿ ಪಾಷಾಣವ ಪೆಣ್ಣ ಮಾಡಿದವನಿಗೆ ಇದು ಏನಸಾಧ್ಯವೊ ಹನುಮ ನೀನೊಲ್ಲದೆ ಕ್ಷಣದಲ್ಲಿ ಸಂಜೀವನ ಗಿರಿ ತಂದಾಗ ಹಣ ಹೊನ್ನು ಬೇಡಲು ಕೊಡದಿದ್ದನೇ ರಾಮ ವಿನಯಿ ವಿಭೀಷಣಗೆ ರಾಜ್ಯವಿತ್ತವನಿಗೆ ಏನಸಾಧ್ಯವೋ ಇದು ಹನುಮ ನೀನೊಲ್ಲದೆ ಸಾರ್ವಭೌಮನು ಮೆಚ್ಚಿದಾಗಲೆ ನೀ ಪೋಗಿ ಉರ್ವಿಯ ಬೇಡಲು ಕೊಡದಿದ್ದನೇ ರಾಮ ಸರ್ವವ ತೊರೆದು ಶ್ರೀ ಪುರಂದರವಿಠಲನ ನಿರ್ವ್ಯಾಜ ಸೇವೆಯ ಬೇಡಿದೆಯೋ ಹನುಮ (ಬೇಲೂರು ಕೇಶವದಾಸರ "ಶ್ರೀ ಕರ್ನಾಟಕ ಭಕ್ತ ವಿಜಯ" ಪುಸ್ತಕದಲ್ಲಿ ಓದಿದ್ದು)