ಹೆಳವನಕಟ್ಟೆ ಗಿರಿಯಮ್ಮ

ಈತ ರಂಗನಾದ ಹರಿಯು ಆತ ಲಿಂಗನಾದ ಹರನು

ಈತ ರಂಗನಾದ ಹರಿಯು
ಆತ ಲಿಂಗನಾದ ಹರನು ||ಪ||

ಗಿರಿಜಾಪತಿಯಾದನಾತ
ಗಿರಿಯ ಬೆನ್ನಲಿ ತಾಳಿದನೀತ
ಸ್ಮರನ ಮಡುಹಿದಾತನಾತ
ಸ್ಮರನ ಜನಕನಾದನೀತ ||೧||

ಶೇಷಭೂಷಣನಾದನಾತ
ಶೇಷಶಾಯಿಯಾದನೀತ
ಪೋಷಿಪ ಭಕ್ತರನಾತ
ದೋಷದೂರನಾದನೀತ ||೨||


ಕಂಗಳ ಮೂರುಳ್ಳವನಾತ
ಮಂಗಳ ದೇವೇಶನೀತ
ತುಂಗ ಹೆಳವನಕಟ್ಟೆ
ರಂಗನೀತ ಲಿಂಗನಾತ    ||೩||

-- ಹೆಳವನಕಟ್ಟೆ ಗಿರಿಯಮ್ಮ

ದಾಸ ಸಾಹಿತ್ಯ ಪ್ರಕಾರ

ಈತ ಲಿಂಗ ದೇವ ಶಿವನು

ರಾಗ : ದುರ್ಗ ತಿಶ್ರ ಏಕತಾಳ ಈತ ಲಿಂಗದೇವ ಶಿವನು, ಆತ ರಂಗಧಾಮ ವಿಷ್ಣು ಮಾತನಾಡೋ ಮಂಕು ಮನುಜ ಮನದ ಅಹಂಕಾರವನೇ ಜರಿದು.... ವೇದಕೆ ಸಿಲುಕಿದನೀತ, ವೇದ ನಾಲ್ಕು ತಂದನಾತ ಬೂದಿ ಮೈಯಲಿ ಧರಿಸಿದನೀತ ಭುವನ ಗಿರಿಯ ಪೊತ್ತನಾತ...
ದಾಸ ಸಾಹಿತ್ಯ ಪ್ರಕಾರ
ಬಗೆ

ಬಾರಮ್ಮ ಶ್ರೀ ರಂಗಧಾಮನ ತಂದು ತೋರಮ್ಮ

ಬಾರಮ್ಮ.. ಶ್ರೀ ರಂಗಧಾಮನ ತಂದು ತೋರಮ್ಮ ವಾರಿಜಾಸನ ಸನಕಾದಿ ವಂದಿತ ಪಾದ ತೋರಿದ ಮಹಿಮ ಧೀರ ಉದ್ಧಾರನ.. || ಬೃಂದಾವನದೊಳಗಾಡುವ ಶ್ರೀ ಗಂಧವ ಮೈಯೊಳು ತೀಡುವ ಚಂದದಿ ಕೊಳಲನ್ನೂದುವ ನಮ್ಮ ಕಂದ ಜಲಕ್ರೀಡೆಯನಾಡುವ ನಂದನಂದನ ಗೋವಿಂದನ ಕಾಣದೆ
ದಾಸ ಸಾಹಿತ್ಯ ಪ್ರಕಾರ

ಹೊನ್ನು ತಾ ಗುಬ್ಬಿ....

ರಾಗ : ಸಿಂಧು ಬೈರವಿ ರೂಪಕ ತಾಳ ಹೊನ್ನು ತಾ ಗುಬ್ಬಿ ಹೊನ್ನು ತಾ ಚಿನ್ಮಯ ಮೂರುತಿ ಚೆಲುವ ರಂಗನ ಕೈಗೆ ಹೊನ್ನು ತಾ ಗುಬ್ಬಿ ಹೊನ್ನು ತಾ..... ಆಗಮವನು ತಂದು ಜಗಕಿತ್ತ ಕೈಗೆ ಸಾಗರವನು ಮಥಿಸಿ ಸುಧೆ ತಂದ ಕೈಗೆ ತೂಗಿ ಮಾತಾಡುವ ಸ್ಥೂಲಕಾಯನ ಕೈಗೆ
ದಾಸ ಸಾಹಿತ್ಯ ಪ್ರಕಾರ