Skip to main content

ಜಗನ್ನಾಥದಾಸ

ಕರುಣಿಸೆನಗಿನಿತು ಕರುಣಾರ್ಣವನೆ ನಿನ್ನ

---------ರಾಗ ಮುಖಾರಿ (ಭೀಮ್ ಪಲಾಸ್ ) ತಾಳ-ಝಂಪೆ

ಕರುಣಿಸೆನಗಿನಿತು ಕರುಣಾರ್ಣವನೆ ನಿನ್ನ
ಚರಣಾಬ್ಜದಲಿ ಭಕುತಿ, ವಿಷಯದಿ ವಿರಕುತಿ ||ಪ||

ಬಿಂಬನೇ, ಸರ್ವ ಪ್ರಯೋಜನವ ಮಾಡಿ ಪ್ರತಿ-
ಬಿಂಬರಿಗೆ ಸತ್ಫಲಗಳೀವ ಕಾವ
ಬಿಂಬನೇ ಸ್ವತಂತ್ರ ಪ್ರತಿಬಿಂಬಾ ಸ್ವತಂತ್ರತಮ-
ನೆಂಬ ಸುಜ್ಞಾನಪೂರ್ವಕ ನಿನ್ನ ಭಜಿಪ ಸುಖ ||೧||

ಕಾರ್ಯ ಕಾರಣ ಅಂಶಿ ಅಂಶಾವತಾರ ಅಂ-
ತರ್ಯಾಮಿ ವ್ಯಾಪ್ಯವ್ಯಾಪಕ ಪ್ರೇರಕ
ಪ್ರೇರ್ಯ ಬಾಧಕ ಬಾಧ್ಯ ಪೋಷ್ಯ ಪೋಷಕ ರೂಪ
ಆರ್ಯರಿಂದರಿತು ಅನುದಿನದಿ ಸುಖಿಸುವ ಭಾಗ್ಯ ||೨||

ತಾರತಮ್ಯದ ಜ್ಞಾನ , ದುರ್ವಿಷಯಗಳಲಿ ಸ-
ದ್ವೈರಾಗ್ಯ , ಹರಿಪ್ರೇಮಿಗಳಲಿ ಪ್ರೇಮ
ಸೂರಿಗಳ ಸಂಗ ಗುಣರೂಪ ಕ್ರಿಯೆಗಳನು ಸುವಿ-
ಚಾರ ಗೈಯುತೆ ನಿತ್ಯದೊಳು ಮೋದಪಡುವಂತೆ ||೩||

ಮಿಂದೋದಕಗಳೆಲ್ಲ ಮಜ್ಜನವು, ದೇಹಾನು-

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಯಾತರ ಭಯ ಶ್ರೀನಾಥನ ಪರಮ ಪ್ರೀತಿಯ ಪಡೆದವಗೆ

---ರಾಗ ಜಂಜೂಟಿ (ಭೈರವಿ) ಆದಿತಾಳ(ಕಹರವಾ)

ಯಾತರ ಭಯ ಶ್ರೀನಾಥನ ಪರಮ-
ಪ್ರೀತಿಯ ಪಡೆದವಗೆ ||ಪ||
ಕಾತರಗೊಳದಲೆ ಪಾತಕಹರವಿಧಿ-
ತಾತನೆ ನಿಜಸುಖದಾತನೆಂದರಿತಗೆ|| ಅ.ಪ||

ದುಸುಮುಸುಗುಟ್ಟುವ ಶಶಿಮುಖಿಯಿಂದಲಿ
ಹಸಗೆಟ್ಟಿದ್ದೇನೋ
ಅಶನಾಚ್ಛಾದನ ತರಲಿಲ್ಲವೆನುತಲಿ
ವ್ಯಸನ ಪಡುವುದೇನೋ
ಕುಸುಮನಾಭ ಸುಮನಸ ವಂದಿತ ಪದ
ವಸುದೇವನ ಸುತನೊಶದೊಳಗಿರುವಗೆ ||೧||

ಬಂಧುಜನರು ತನಗೊಂದಿಸಿದಾಕ್ಷಣ
ಬಂದ ಭಾಗ್ಯವೇನೊ
ಹಿಂದೆ ಮುಂದೆ ತನ್ನ ನಿಂದಿಸಿ ನುಡಿಯಲು
ಕುಂದಾದದ್ದೇನೊ
ಮಂದರಧರ ಗೋವಿಂದನ ಮಾನಸ-
ಮಂದಿರದೊಳು ತಂದಿಟ್ಟಿರುವವಗೆ ||೨||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಬೇಡಲೇತಕೆ ಪರರ ದೇಹಿಯೆಂದು

-- ರಾಗ - ಕಾಂಬೋಧಿ (ಭೂಪ್ ) ಝಂಪೆತಾಳ

ಬೇಡಲೇತಕೆ ಪರರ ದೇಹಿಯೆಂದು ||ಪ||
ನೀಡುವ ದೊರೆ ನಮಗೆ ನೀನಿರಲು ಸರ್ವದಾ ||ಅ.ಪ||

ಗ್ರಾಸವನು ಬೇಡೆ ದೂರ್ವಾಸ ಮುನಿಗನ್ನನಾ-
ಯಾಸದಿಂ ತತ್ಕಾಲದಲಿ ಕಲ್ಪಿಸಿ
ಆ ಸಂಯಮಿಗೆ ಉಣಿಸಿ ದಣಿಸಿದ ಮಹಾದಾತ
ದಾಶರಥೆ ನಿನ್ನ ಬಿಟ್ಟನ್ಯದೇವತೆಗಳನು ||೧||

ಖೂಳ ದುಶ್ಶಾಸನನು ದ್ರೌಪದಿಯ ಸಭೆಯೊಳು ದು-
ಕೂಲವನು ಸೆಳೆಯೆ ದ್ವಾರಕಾಮಂದಿರ
ಶ್ರೀಲೋಲ ಶ್ರೀಕೃಷ್ಣ ಕರುಣಿಸು ಕರುಣಿಸೆನೆ
ಪಾಂಚಾಲಿ ಮೊರೆ ಕೇಳಿ ದಿವ್ಯಾಂಬರನಿಚಯವಿತ್ತೆ ||೨||

ಮಡದಿ ಕಳುಹಲು ಬಂದ ಬ್ರಾಹ್ಮಣನ ಪೀಡಿಸುವ
ಬಡತನವ ಕಳೆದೆ ಒಪ್ಪಿಡಿ ಅವಲಿಗೆ
ಪೊಡವಿಯನ್ನಾಳಿದೆ ಕ್ರಿಮಿಗೊಲಿದು , ಕರುಣದಲಿ
ಜಡಜಸಂಭವ ಮೃಡಬಿಡೌಜರೀಪ್ಸಿತ ಕೊಡುತೆ ||೩||

ತಾಪಸೋತ್ತಮ ಮೃಕಂಡಾತ್ಮಜಗೆ ಕಲ್ಪಾಯು

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಕಾಯೊ ಕಾಯೊ ಕಮಲಾಯತಾಕ್ಷ

-- ರಾಗ ಬೇಹಾಗ್ (ಜೋಗಿಯಾ) ಆದಿತಾಳ(ದೀಪಚಂದಿ)

ಕಾಯೊ ಕಾಯೊ ಕಾಯೊ ಕಮಲಾಯತಾಕ್ಷ ||ಪ||

ಕಾಯೊ ಕಾಯೊ ಕಾಯೊ ಕಮಲಾಯತಾಕ್ಷ ಭವ
ತೋಯನಿಧಿಯೊಳು ಬಿದ್ದು ಬಾಯ ಬಿಡುವೆ ಬೇಗದಿ ಬಂದು ||ಅ,ಪ||

ಅದ್ವೈತತ್ರಯ ದಧ್ವಪ್ರವರ್ತಕ
ಸದ್ವೈಷ್ಣವ ಪಾದದ್ವಯ ತೋರಿ ||೧||

ಸಂಜೆಯ ತೋರಿ ಧನಂಜಯನುಳುಹಿದೆ
ಮಂಜುಳ ಚರಿತ ನಿರಂಜನ ಮೂರ್ತೇ ||೨||

ಕುಕ್ಷಿಯೊಳಂದು ಪರೀಕ್ಷಿದ್ರಾಜನ
ರಕ್ಷಿಸಿದಂತೆ ಪ್ರತಿ ಪ್ರತಿ ಕ್ಷಣದಿ ||೩||

ಅಧಮನು ನಾನಹುದು ದಧಿಶಯನ ಸನ್-
ಮುದಮುನಿ ಮತ ಪೊಂದಿದ ರಣುಗನ ನೀ ||೪||

ನೀ ದಯಮಾಡದಡೇ ದಿವಿಜರು ಒಲಿ-
ದಾದರಿಸುವರೇ ವೃಕೋದರ ವಂದ್ಯ ||೫||

ಸತ್ಯಾತ್ಮಕ ಭವಭೃತ್ಯಗೆ ಬಂದಪ-
ಮೃತ್ಯು ಕಳೆದು ಸಂಪತ್ತು ಪಾಲಿಸಿ ||೬||

ಎಲ್ಲರೊಳಿಹ ಕೈವಲ್ಯದರಸೆ ನೀ
ಬಲ್ಲಿದನೆಂಬುದ ಬಲ್ಲೆ ಬಹುಬಗೆ ||೭||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

Pages