ಪದ / ದೇವರನಾಮ

ದಾಸರ ಪದಗಳು

ನಡತೆ ಹೀನನಾದರೇನಯ್ಯ , ಜಗದೊಡೆಯನ ಭಕ್ತಿಯಿದ್ದರೆ ಸಾಲದೆ

( ಪೂರ್ವಿ ರಾಗ ಅಷ್ಟತಾಳ) ನಡತೆ ಹೀನನಾದರೇನಯ್ಯ , ಜಗ- ದೊಡೆಯನ ಭಕ್ತಿಯಿದ್ದರೆ ಸಾಲದೆ ಮಿಕ್ಕ ನಡತೆ ||ಪ|| ಪುಂಡರಾ ಪಾಂಡುನಂದನರು ಮತ್ತದರೊಳು ಗಂಡರೈವರು ಭೋಗಿಪರು ಖಂಡಿಸಿದರು ರಣದೊಳಗೆ ಗುರುಹಿರಿಯರ ಪುಂಡರೀಕಾಕ್ಷನ ಒಲುಮೆಯೊಂದಲ್ಲದೆ ||೧|| ಒಂದೊಂದು ಪರಿ ಬುದ್ಧಿಯ ಪೇಳಿ ಹಿರಣ್ಯಕ ಕಂದನ ನಿರ್ಬಂಧಿಸುತಿರೆ ಅಂದು ಸಾಧಿಸಲು ಕಂಬದ ಬಳಿಯೆ ತನ್ನ ತಂದೆಯನು ಕೊಲಿಸಿದನೆಂಬುವರು ಜನರು ||೨|| ದಾಸಿಯ ಜಠರದೊಳು ಜನಿಸಿದ ವಿದುರ ಸ- ನ್ಯಾಸಿ ಎನಿಸಿಕೊಂಡ ಸಾಸಿರ ನಾಮದೊಡೆಯ ವೇಂಕಟೇಶಾದಿ- ಕೇಶವನಾ ಭಕುತಿಯೊಂದಿದರೆ ಸಾಕು||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಂಸಾರ ಸ್ಥಿರವೆಂದು ನಂಬದಿರು ವ್ಯರ್ಥ

(ರಾಗ ಮುಖಾರಿ ಝಂಪೆ ತಾಳ) ಸಂಸಾರ ಸ್ಥಿರವೆಂದು ನಂಬದಿರು ವ್ಯರ್ಥ ಕಂಸಾರಿ ಪಾದಭಜನೆಯ ಬಿಟ್ಟು ಬರಿದೆ||ಪ|| ಪಂಚ ಭೂತಾಂಶವೆಂಬ ದೇಹವಿದಕೆದ್ದಿ ಪಂಚೇಂದ್ರಿಯಗಳ ವಿಷಯಗಳ ಸಹಿತಲು ಪಂಚದ್ವಿಗುಣವು ಪರಣವಾಶ್ರಯದೊಳು ಕೂಡಿ ಸಂಚರಿಸಿ ತೊಳಲುವುದಲ್ಲದೆ ಅನ್ಯವಿಹುದೆ ||೧|| ಅಷ್ಟರಾಗವು ಕರಣ ಅಷ್ಟವಿಷಯವು ಸಹಿತ ಅಷ್ಟಕೊಂದನು ಕಡಮೆ ಧಾತುಗಳನು ಶಿಷ್ಟನಾಡಿಯ ಮೂರು ದುಂಡೆಲು ಮೂರರಲಿ ಚೇಷ್ಟಿಸುತ ಕೆಡುವುದಲ್ಲದೆ ಅನ್ಯವಿಹುದೆ ||೨|| ದೂಷಣ ತ್ರಿವಿಧ ಮತ್ತೀಷಣ ತ್ರಿವಿಧ ಗುಣ ರಾಶಿ ತ್ರಿವಿಧಾವಸ್ಥೆಗಳನು ಮತ್ತೆ ಈಷಣ*ತ್ರಯ ತಾಪಕೋಶಗಳನೈದಿದೀ ನಾಶಿಸುವ ದೇಹವಲ್ಲದೆ ಬೇರಿರುದೆ ||೩|| ಮಾರುತ ಸಹಿತೊಂಬತ್ತಾರು ತತ್ವವು ಸಹಿತ ತೋರುತ್ತಲಿಹ ಈ ಶರೀರದೊಳಗೆ ಸಾರಾಂಶವಿದುವೆಂಬ ಸಾರಗಳನರಿತು ಸಂ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಷ್ಟು ಪೇಳ್ದರು ಬುದ್ಧಿ ಬಾರದೀ ಮನಕೆ

(ಸಾವೇರಿ ರಾಗ ತ್ರಿವಿಡೆ ತಾಳ) ಎಷ್ಟು ಪೇಳ್ದರು ಬುದ್ಧಿ ಬಾರದೀ ಮನಕೆ ಕಷ್ಟ ಬಂದೊದಗಿ ದುಃಖಿಪ ಸಮಯಕಲ್ಲದೆ||ಪ|| ಸತಿಯು ಸುತ ಗೃಹಾದಿಗಳೆಂಬಿರುವ ಸಾಧನದಿ ಮತಿಗೆಟ್ಟು ಮೋಹವನು ಬೆರೆಸಿಕೊಳುತ ಗತಿಯ ಕಾಣದೆ ಕಡೆಗೆ ಅತಿದುಃಖವೆಂಬ ಸಂ- ತತಿಯೊಳಡಗಲು ಮತ್ತೆ ಮತಿ ಬರುವುದಲ್ಲದೆ ||೧|| ಸಾಧು ಸಜ್ಜನರುಗಳು ದಯದೊಳಗೆ ಅರಹುತ್ತಿಹ ಬೋಧೆಗಳಿಗನುಸರಿಸದಂತೆ ನಡೆದು ಹಾದಿ ತಪ್ಪಿ ಕುಣಿಯಲಿ ಬಿದ್ದ ಇಭ*ದಂತೆ ಆದಿತ್ಯ ಸುತ ಬಾಧಿಸುವ ಸಮಯಕಲ್ಲದೆ ||೨|| ಬರಿದೆ ಮಾಯ ಭ್ರಮೆಯೊಳು ಮೆರೆದು ನಿನ್ನಲಿ ನೀನು ಕರಗದೆಯೆ ಅರಿತಿರುವ ಪರಿಯ ಕೇಳು ಪರಕೆ ಪರತರನಾದ ವರದ ಸಿರಿ ನಿತ್ಯಾತ್ಮ ಚರಣ ಸ್ಮರಿಸುತ್ತಿರು ನರಕಕೊಳಗಾಗದೆ ||೩|| ( *ಇಭ=ಆನೆ)
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಾಮ ರಕ್ಷಿಸೋ ಕೋದಂಡಪಾಣಿ

(ದ್ವಿಜಾವಂತಿ ರಾಗ) ರಾಮ ರಕ್ಷಿಸೋ ಕೋದಂಡಪಾಣಿ ರಾಮ ರಕ್ಷಿಸೋ || ಪ|| ಬಾಲತನದೊಳು ಬಹು ಲೀಲೆಯೊಳಗಿದ್ದೆ ಮೇಲೆ ಯೌವನದಲಿ ನಿಮ್ಮ ಪೂಜಿಸದೆ ಜಾಲ ಸ್ತ್ರೀಯರ ಕೂಡಾಡಿ ಮರುಳಾದೆ ಕಾಲನ ಬಾಧೆಗೆ ನಾನು ಗುರಿಯಾದೆ ||೧|| ಅಜಮಿಳಗೊಲಿದು ಅಂಬರೀಶನ ಕಾಯ್ದೆ ಗಜರಾಜ ದ್ರೌಪದಿಯರ ರಕ್ಷಿಸಿದೆ ಭಜಿಸುವ ಭಕ್ತರ ಪಾಪವ ಹರಿದೆ ಸಿರಿ- ಅಜ ನಿನ್ನ ನೆನೆಯದೆ ನಾ ಮರುಳಾದೆ ||೨|| ಪೊಡವಿಗಧಿಕವೆಂದು ಕಡಬಡಿ ನಿಂದೆ ದೃಢ ಭಕ್ತರನು ಪೊರೆವ ಕರುಣಾಸಿಂಧು ಕಡು ಚೆಲ್ವ ರಾಮಮೂರುತಿ ಗತಿಯೆಂದು ಬಿಡದೆ ನಂಬಿದೆ ನಿನ ಪಾದವ ಬಂದು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆಸೆ ಎಂಬ ಪಾಶ ಬಿಡದು ಮನುಜರಿಗೆ

(ರಾಗ ಮುಖಾರಿ, ಝಂಪೆತಾಳ) ಆಸೆ ಎಂಬ ಪಾಶ ಬಿಡದು ಮನುಜರಿಗೆ ಏಸು ಸೌಭಾಗ್ಯಗಳಿದ್ದರೆಯು ಮತ್ತೆ ||ಪ|| ವೃದ್ಧಾಪ್ಯದಿಂದ ಜರೆನೆರೆಯು ಬಧಿಸಿವಾಗ್ವಿ- ರುದ್ಧ ಬಂದೆರೆಡು ದಂತಗಳಿಲ್ಲದೆ ಶುದ್ಧ ಸಿತಕೇಶಂಗಳಾಗಿ ಸ್ವತಂತ್ರವಹ ಬುದ್ಧಿ ಲೇಶಾಂಶವಿಲ್ಲದೆ ಇದ್ದವರಿಗು ||೧|| ಉದಯ ಮಧ್ಯಾಹ್ನ ಸಾಯಂ ತ್ರಿಕಾಲ ಕರ್ಮ ಮೊದಲಾದವಿನಿತು ಒಡನೊಡನೆ ತೋರಿ ಮಡದಿ ಕಾಲಕ್ರೀಡೆಯಹುದು ತತ್ಸಂಗದ ಒದಗಿದಾಯುಷ್ಯ ನೀಗಿ ಹೋಹುದನರಿತು ||೨|| ಅಂತು ಅಂತಿಂತು ಮಯಾ ಮೋಹಿತದಿ ಮರು ಚಿಂತಿಸುತ ನಿತ್ಯ ದುಃಖಿಪರಲ್ಲದೆ ಅಂತಸ್ತನಾದ ನಿತ್ಯಾತ್ಮನ ಬಿಡದೆ ಏ- ಕಾಂತದಲಿ ನೆನೆದು ಸಂತೋಷಿಪಗಲ್ಲದೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಚ್ಚರಿಕೆ ಭಾಗ್ಯ ಯಾರಿಗೂ ಸ್ಥಿರವಿಲ್ಲ

( ರಾಗ - ಸೌರಾಷ್ಟ್ರ ಅಷ್ಟತಾಳ) ಎಚ್ಚರಿಕೆ ಭಾಗ್ಯ ಯಾರಿಗೂ ಸ್ಥಿರವಿಲ್ಲ, ನಿಶ್ಚಯವೆಚ್ಚರಿಕೆ ಹೆಚ್ಚದೆ ಹಿಗ್ಗದೆ ಇದ್ದರೆ ಲೋಕಕೆ ಮೆಚ್ಚು ಕೇಳೆಚ್ಚರಿಕೆ ||ಪ|| ದೊರೆಗಳೊಲುಮೆ ಉಂಟೆಂದು ಎಲ್ಲರೊಳು ಹಗೆ ತರವಲ್ಲ, ಎಚ್ಚರಿಕೆ ಕರವ ಮುಗಿದು ಸಜ್ಜನರಿಗೆ ಶಿರ ಬಾಗಿ ನಡೆಯುವುದು, ಎಚ್ಚರಿಕೆ ||೧|| ಸಿರಿಯೆಂಬ ಸೊಡರಿಗೆ ಮಾನದ ಅಭಿಮಾನ ಬಿರುಗಾಳಿ, ಎಚ್ಚರಿಕೆ ಧರೆಯೊಳಗೆ ಸುಸ್ಥಿರವೆಂದು ಗರ್ವದೊಳು ನಡೆಯದಿರು ಎಚ್ಚರಿಕೆ ||೨|| ಕೊಡವ ಅಂಧಕ ಹೊತ್ತು ನಡೆವಧಿಕಾರದಿ ನೆರೆ ತಪ್ಪುದೆಚ್ಚರಿಕೆ ಬಡವರೆಡರ ಕೇಳದೆ ಮುಂದಕೆ ಹೆಜ್ಜೆ ಇಡಬೇಡ , ಎಚ್ಚರಿಕೆ ||೩|| ಲೋಕಾಪವಾದಕೆ ಅಂಜಿ ನಡೆಯುವುದು ವಿವೇಕ , ಕೇಳೆಚ್ಚರಿಕೆ ನಾಕೇಶನಾದರು ಬಿಡದಪವಾದ ಪರಾಕು , ಕೇಳೆಚ್ಚರಿಕೆ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನು ಪೇಳುವೆ ಇಂತು ಆ ಮಾನವರೊಡನೆ

( ಸಾವೇರಿ ರಾಗ ತ್ರಿವಿಡೆತಾಳ) ಏನು ಪೇಳುವೆ ಇಂತು ಆ ಮಾನವರೊಡನೆ ಮೌನದಿ ಮನದೊಳು ನಗುತಿಹನಲ್ಲದೆ ||ಪ|| ವೇದಾಂತ ಶಾಸ್ತ್ರವೆಂತಿರುತಿಹುದೆಂಬ ಹಾದಿಯ ತಿಳಿಯದೆ ಅವರು ಪರಜೀವರ ಭೇದದ ಬಗೆಯಿದೆಂಬ ಆವುದರಿಯದ ಮೂಢ ವಾದದಲಿ ಮುಕ್ತಿಯ ಮೆರೆದಾಡುವವರೊಳು ||೧|| ತನುವಿದೆ ತಾನೆಂದು ಮನೆ ಧನ ತನದೆಂದು ವನಿತಾದಿಯೊಳಗೆ ಆಸಕ್ತನಾಗುತಲೆ ತನಗೆಂದು ಸ್ಥಿರವೆಂದು ಭಾವಿಸಿ ಮೋಹದಿ ಚಿನುಮಯಾತ್ಮಕನನೊಮ್ಮೆ ನೆನೆಯದೆ ಇಹರೊಳು ||೨|| ಹರಿ ಭಜನೆಯ ತಾವು ಮಾಡರು, ಮಾಳ್ಪರೊಳು ಹಿರಿಯತನದಿ ಬುದ್ಧಿ ತಾವು ಹೇಳುವರು ಮರುಳೆ ನೀನೀಗಲೆ ಅರಿತೆ ನೀ ರೀತಿಯನು ಬರಿವಲ್ಲ ನೋಳ್ಪುದು ಸರಿಯಲ್ಲ ಎನಿಪರೊಳು ||೩|| ನಿನ್ನದಿದೆಲ್ಲವು ನೀನೆ ಪಾಲಿಸತಕ್ಕದು ಇನ್ನು ನೀನೀ ಪರಿ ಮರುಳಹರೆ ಮನುಜ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಲ್ಲೆಂದರಾಗುವುದೇ ಅಲ್ಲಿ ಪಡೆದು ಬಂದುದನ್ನು

(ನೀಲಾಂಬರಿ ರಾಗ ರೂಪಕ ತಾಳ) ಒಲ್ಲೆಂದರಾಗುವುದೇ ಅಲ್ಲಿ ಪಡೆದು ಬಂದುದನ್ನು ಎಲ್ಲವನ್ನು ಉಂಡು ತೀರಿಸಬೇಕು ಮನವೆ ||ಪ|| ತಂದೆ ತಾಯಿಯ ಬಸಿರಿನಲ್ಲಿ ಬಂದ ಅಂದಂದಿಗೂ ಒಂದಿಷ್ಟು ಸುಖವ ನಾ ಕಾಣೆ ಜೀವನವೆ ಬಂದದ್ದನೆಲ್ಲವನ್ನು ಉಂಡು ತೀರಿಸಬೇಕು, ಭ್ರಮೆ- ಯಿಂದ ಮನವೆ ನಿನಗೆ ಬಯಲಾಸೆ ಯಾಕೋ ||೧|| ಎಮ್ಮ ಅರ್ಥ ಎಮ್ಮ ಮನೆ ಎಮ್ಮ ಮಕ್ಕಳು ಎಂಬ ಹಮ್ಮು ನಿನಗೆ ಏಕೋ ಹಗೆಯ ಜೀವನವೆ ಬ್ರಹ್ಮನು ಫಣೆಯಲ್ಲಿ ಬರೆದ ಬರಹ ತಪ್ಪುವುದುಂಟೆ ಸುಮ್ಮನೆ ಬಯಲಾಸೆ ವ್ಯರ್ಥ ಜೀವನವೆ ||೨|| ಅಂತರಂಗದಲ್ಲೊಂದು ಅರ್ಧ ದೇಹದಲ್ಲೊಂದು ಚಿಂತೆಗನುಗೊಳಲೇಕೆ ಪಂಚೈವರಿರಲು ಕಂತುಪಿತ ಕಾಗಿನೆಲೆ ಆದಿಕೇಶವರಾಯ ಲಕ್ಷ್ಮೀ- ಕಾಂತ ನಮ್ಮನಲ್ಲಿಗೆ ಕರೆಕಳುಹುವ ತನಕ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀ ಯದುವರ ಪರಿಪಾಲಿಸು ಎನ್ನನು

(ರಾಗ ಘಂಟಾ ಆದಿತಾಳ) ಶ್ರೀ ಯದುವರ ಪರಿಪಾಲಿಸು ಎನ್ನನು ಭಕ್ತ ಕಾಮಧೇನು ಕಾಯದೆ ನೀ ಭಕ್ತನ ಬಿಟ್ಟರೆ ನಾನು ಮಾಡುವದೇನು ||ಪ|| ಪೆತ್ತ ತಾಯಿಯು ತನ್ನ ಶಿಶುವ ಕೊಲ್ಲಲು ಮತ್ತೆ ಕಾಯ್ವರಾರೈ ಸುತ್ತಿದ ಬೇಲಿಯ ಎದ್ದು ಪೈರ ಮೇಯೆ ಮತ್ತೆ ಕಾಯ್ವರಾರೈ ಕತ್ತಲೆಯೊಳು ಮೇಲೆ ಗಗನವು ಬಿದ್ದರೆ ಮತ್ತೆ ಕಾಯ್ವರಾರೈ ಉತ್ತಮವಾದ ಈ ಅನ್ನವು ವಿಷವಾಗೆ ಮತ್ತೆ ಕಾಯ್ವರಾರೈ ||೧|| ವಾರಿದವೃಂದಗಳು ವಹ್ನಿಯ ಕರೆದರೆ ಮತ್ತೆ ಕಾಯ್ವರಾರೈ ಧಾರುಣಿಯರಸನು ಪ್ರಜೆಗಳ ಕೊಲ್ಲಲು ಮತ್ತೆ ಕಾಯ್ವರಾರೈ ನಾರಿಯು ಮಲಗಿದ ಪತಿಯ ಕೊರಳ ಕೊಯ್ಯೆ ಮತ್ತೆ ಕಾಯ್ವರಾರೈ ಶೂರ ಪತಿಯು ತನ್ನ ಮಡದಿಯ ಕೊಂದೊಡೆ ಮತ್ತೆ ಕಾಯ್ವರಾರೈ ||೨|| ವೈಕುಂಠನಗರದ ನರಸಿಂಹರೂಪನೆ ನೀನೆ ಲೋಕಬಂಧು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏಕಯ್ಯ ಎನ್ನ ನೀ ಪರಿಪಾಲಿಸೆ

(ರಾಗ ಕಲ್ಯಾಣಿ ಝಂಪೆ ತಾಳ) ಏಕಯ್ಯ ಎನ್ನ ನೀ ಪರಿಪಾಲಿಸೆ ಲೋಕೈಕನಾಥ ನಿನಗೇಕೆ ಬೇಸರವಿಷ್ಟು ||ಪ|| ತೇರಿಗೊಂದೇ ಬಂಡಿ ಹೂಡಲೇಳೇ ಕುದುರೆ ಸೇರಿಸುತ ಕಟ್ಟಲು ಭುಜಂಗ ಹಗ್ಗ ಸಾರಥಿಯು ಕುಂಟನೈ ಹರಿಸೆ ಧರಣಿಯು ಇಲ್ಲ ಈ ರೀತಿಯಾದೊಡೆ ತಿರಿವ ದಿನಪನ ನೋಡು ||೧|| ಸಿರಿಯು ಧರಣಿಯು ನಿನಗೆ ಮಡದಿಯರು , ಮಾವನು ಹಿರಿಯ ರತ್ನಾಕರನು ರಜತಾದ್ರಿವಾಸಿ ಹಿರಿಯ ಮೊಮ್ಮಗನು ಓಷಧೀಷ ತಾ ಮೈದುನನು ದಾರಿದ್ರ್ಯವೇನಯ್ಯ ಎನ್ನ ಪೊರೆಯುದಕೆ ||೨|| ಅಂದು ಧ್ರುವನು ಕಾಯ್ದೆ ಅಂಬರೀಷನು ಧರ್ಮ - ನಂದನನ ಪೊರೆಯೆ ಸಾಲವನೆಲ್ಲಿ ತಂದೆ ಇಂದೆನ್ನ ಪೊರೆಯಲು ಅಂದಿತ್ತವರು ನೂಕುವರೆ ತಂದೆ ವೈಕುಂಠಪುರದೆರೆಯ ನರಹರಿಯೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು