ಸಾರಿ ಭಜಿಸಿರೊ ಟೀಕಾರಾಯರಂಘ್ರಿಯ

ಸಾರಿ ಭಜಿಸಿರೊ ಟೀಕಾರಾಯರಂಘ್ರಿಯ

ಸಾರಿ ಭಜಿಸಿರೊ ಟೀಕಾರಾಯರಂಘ್ರಿಯ ಘೋರಪಾತಕಾಂಭುದಿಯ ಪಾರು ಮಾಳ್ಪರಾ || ಪ || ಮೋದ ತೀರ್ಥರ ಮತವ ಸಾಧಿಸುವರಾ ಪಾದ ಸೇವ್ಯರಾ ದುರ್ಬೊಧ ಕಳೆವರಾ || ೧ || ಭಾಷ್ಯತತ್ವವ ವಿಸ್ತಾರ ಮಾಳ್ಪಾರಾ ದೋಷ ದೂರಾರಾ ಆದಿ ಶೇಷವೇಷರಾ || ೨ || ಕಾಮ ಗೆದ್ದರಾ ಹರಿಗೆ ಪ್ರೇಮ ಪೂರ್ಣರಾ ನೇಮ ನಿತ್ಯರ ನಿಷ್ಕಾಮನಾಪರಾ || ೩ || ಮೋಕ್ಷದಾತರಾ ಅಕ್ಷೋಭ್ಯ ತೀರ್ಥರಾ ಸಾಕ್ಷಿ ಇಪ್ಪರಾ ಅಪೇಕ್ಷೆ ರಹಿತರಾ || ೪ || ವಿಜಯವಿಠಲನ ಅಂಘ್ರಿ ಭಜನೆ ಮಾಳ್ಪರಾ ಕುಜನ ಭಂಜರಾ ದಿಗ್ವಿಜಯ ರಾಯಾರಾ || ೫ || ಸೂ : ಶ್ರೀ ಜಯತೀರ್ಥರು ಶ್ರೀ ಮಧ್ವರ ಕೃತಿಗಳಿಗೆ ಟೀಕೆ ಬರೆದವರು, ಮುಂದೆ ಟೀಕಾಚಾರ್ಯರೆಂದೆ ಪ್ರಸಿದ್ಧಿಯಾದರು, ಇವರ ವೃಂದಾವನ ಗುಲಬರ್ಗಾ ಹತ್ರ ಮಳಖೇಡದಲ್ಲಿ ಕಾಗಿನ ತೀರದಲ್ಲಿ ಇದೆ.
ದಾಸ ಸಾಹಿತ್ಯ ಪ್ರಕಾರ