ಸಂಸಾರ ಸ್ಥಿರವೆಂದು ನಂಬದಿರು ವ್ಯರ್ಥ

ಸಂಸಾರ ಸ್ಥಿರವೆಂದು ನಂಬದಿರು ವ್ಯರ್ಥ

(ರಾಗ ಮುಖಾರಿ ಝಂಪೆ ತಾಳ) ಸಂಸಾರ ಸ್ಥಿರವೆಂದು ನಂಬದಿರು ವ್ಯರ್ಥ ಕಂಸಾರಿ ಪಾದಭಜನೆಯ ಬಿಟ್ಟು ಬರಿದೆ||ಪ|| ಪಂಚ ಭೂತಾಂಶವೆಂಬ ದೇಹವಿದಕೆದ್ದಿ ಪಂಚೇಂದ್ರಿಯಗಳ ವಿಷಯಗಳ ಸಹಿತಲು ಪಂಚದ್ವಿಗುಣವು ಪರಣವಾಶ್ರಯದೊಳು ಕೂಡಿ ಸಂಚರಿಸಿ ತೊಳಲುವುದಲ್ಲದೆ ಅನ್ಯವಿಹುದೆ ||೧|| ಅಷ್ಟರಾಗವು ಕರಣ ಅಷ್ಟವಿಷಯವು ಸಹಿತ ಅಷ್ಟಕೊಂದನು ಕಡಮೆ ಧಾತುಗಳನು ಶಿಷ್ಟನಾಡಿಯ ಮೂರು ದುಂಡೆಲು ಮೂರರಲಿ ಚೇಷ್ಟಿಸುತ ಕೆಡುವುದಲ್ಲದೆ ಅನ್ಯವಿಹುದೆ ||೨|| ದೂಷಣ ತ್ರಿವಿಧ ಮತ್ತೀಷಣ ತ್ರಿವಿಧ ಗುಣ ರಾಶಿ ತ್ರಿವಿಧಾವಸ್ಥೆಗಳನು ಮತ್ತೆ ಈಷಣ*ತ್ರಯ ತಾಪಕೋಶಗಳನೈದಿದೀ ನಾಶಿಸುವ ದೇಹವಲ್ಲದೆ ಬೇರಿರುದೆ ||೩|| ಮಾರುತ ಸಹಿತೊಂಬತ್ತಾರು ತತ್ವವು ಸಹಿತ ತೋರುತ್ತಲಿಹ ಈ ಶರೀರದೊಳಗೆ ಸಾರಾಂಶವಿದುವೆಂಬ ಸಾರಗಳನರಿತು ಸಂ- ಸಾರ ಬಂಧನ ಬಿಟ್ಟು ಸ್ಥಿರ ಬಾಳು ಮನುಜ ||೪|| ಅಣುರೇಣು ತೃಣಕಾಷ್ಠ ಭರಿತನಾಗಿರುತಿರ್ಪ ಚಿನುಮಯಾತ್ಮಕ ಭಕ್ತಜನ ರಕ್ಷಕ ಅನುದಿನ ಸಲಹುವನು ಮನದಿ ಸ್ಮರಿಸಲು ಬಿಡದೆ ಘನಮಹಿಮ ನಿತ್ಯಾತ್ಮ ಸಿರಿಯರಸ ನಮ್ಮ||೫|| (ಈಷಣ= ಆಸೆ, ಬಯಕೆ, ಆತುರ)
ದಾಸ ಸಾಹಿತ್ಯ ಪ್ರಕಾರ
ಬರೆದವರು