ವೃಂದಾವನ ನೋಡಿರೋ | ಗುರುಗಳ ವೃಂದಾವನ ಪಾಡಿರೋ

ವೃಂದಾವನ ನೋಡಿರೋ | ಗುರುಗಳ ವೃಂದಾವನ ಪಾಡಿರೋ

ರಾ ಗ - ಕಲ್ಯಾಣಿ : ತಾಳ - ಆದಿತಾಳ ವೃಂದಾವನ ನೋಡಿರೋ | ಗುರುಗಳ ವೃಂದಾವನ ಪಾಡಿರೋ | ಪ | ವೃಂದಾವನ ನೋಡಿ ಆನಂದ ಮದವೇರಿ| ಚೆಂದದಿ ದ್ವಾದಶ ಪುಂಡ್ರಾಂಕಿತಗೊಂಬ | ಅ ಪ | ತುಂಗಭದ್ರಾ ನದಿಯ ತೀರದಲಿ | ಉತ್ತುಂಗ ಮಂಟಪದ ಮಧ್ಯದಿ | ಶೃಂಗಾರ ತುಳಸಿ ಶ್ರೀಪದ್ಮಾಕ್ಷಸರಗಳಿಂದ ಮಂಗಳಕರ ಮಹಾ ಮಹಿಮೆಯಿಂದೊಪ್ಪುವ | ೧ | ದೇಶ ದೇಶದಿ ಮೆಚ್ಚುತ | ಇಲ್ಲಿಗೆ ಬಂದು ವಾಸವಾಗಿ ಸೇವಿಪ | ಭಾಷೆ ಕೊಟ್ಟಂದದಿ ಬಹುವಿಧವರಗಳ | ಸೂಸುವ ವರಮಹಾ ಮಹಿಮೆಂದೊಪ್ಪುವ | ೨ | ನಿತ್ಯ ಸನ್ನಿಧಿ ಸೇವಿಪ | ಭಕ್ತರಿಗೆಲ್ಲ ಮತ್ತೆ ಅಭೀಷ್ಟವ ಕೊಡುವ | ಸತ್ಯದಿ ಗುಣಸಿಂಧು ವೆಂಕಟವಿಟ್ಠಲನ| ನಿತ್ಯ ಸನ್ನಿಧಿಯಿ೦ದ ನಿರುತ ಪೂಜೆಯಗೊಂಬ | ೩ |
ದಾಸ ಸಾಹಿತ್ಯ ಪ್ರಕಾರ
ಬರೆದವರು