ವರಕವಿಗಳ ಮುಂದೆ ನರಕವಿಗಳು
( ರಾಗ ಸೌರಾಷ್ಟ್ರ , ಅಷ್ಟ ತಾಳ)
ವರಕವಿಗಳ ಮುಂದೆ ನರಕವಿಗಳು ವಿದ್ಯೆ ಮಾಡಬಾರದು , ಈ
ಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದು
ಪಾಪಿಗಳಿದ್ದಲ್ಲಿಗೆ ರೂಪುಳ್ಳ ವಸ್ತುವ ತೋರಬಾರದು , ಬಹು
ಕೋಪಿಗಳಿದ್ದಲ್ಲಿ ಅನುಭವ ಗೋಷ್ಠಿಯ ಮಾಡಬಾರದು
ಅಡಿಸತ್ತ ಮಡಕೆಗೆ ಜೋಡಿಸಿ ಒಲೆಗುಂಡ ಹೂಡಬಾರದು , ಅತಿ
ಬಡತನ ಬಂದಾಗ ನೆಂಟರ ಬಾಗಿಲ ಸೇರಬಾರದು
ಹರಿಯ ಜರೆದು ಹರ ಘನನೆಂದು ನರಕಕ್ಕೆ ಸೇರಬಾರದು, ತಾ
ಪರರನ್ನು ಬೈದು ಪಾತಕಕೆ ಮುನ್ನೊಳಗಾಗಬಾರದು
ಮಡದಿ ನುಡಿಯ ಕೇಳಿ ಜಗಳಕೊಬ್ಬರ ಕೂಡೆ ಹೋಗಬಾರದು, ಬಾ-
ಯ್ಬಡಕರು ಇದ್ದಲ್ಲಿ ವಸ್ತಿ ಬಿಡಾರವ ಮಾಡಬಾರದು
ಮುಂದೆ ಭಲಾ ಎಂದು ಹಿಂದೆ ನಿಂದಿಪರನ್ನು ಕೂಡಬಾರದು , ಬಾಡ-
ದಾದಿಕೇಶವನ ಚರಣದ ಸ್ಮರಣೆಯ ಮರೆಯಬಾರದು
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments