ಲಾಲಿ ಶ್ರೀ ಹಯವದನ

ಲಾಲಿ ಶ್ರೀ ಹಯವದನ

ಲಾಲಿ ಶ್ರೀ ಹಯವದನ ಲಾಲಿ ರಂಗ ವಿಠಲ ಲಾಲಿ ಗೋಪಿನಾಥ ಲಕ್ಷ್ಮೀ ಸಮೇತ|| ಮುತ್ತು ಮಾಣಿಕ ಬಿಗಿದ ತೊಟ್ಟಿಲೊಳಗೊಲ್ಲ ಎತ್ತಿದರು ಎನ್ನಯ ಕೈಯೊಳಗೆ ನಿಲ್ಲ| ಭಕ್ತರಿಗೆ ವರಗಳನು ಕೊಡುವ ಹೊತ್ತಿಲ್ಲ ಪುತ್ರನ ಎತ್ತಿಕೊ ನಂದಗೋಪಾಲ|| ಮನೆಯೊಳಗೆ ಇರನೀತ ಬಹು ರಚ್ಚೆವಂತ ಮನೆವಾರ್ತೆ ಯಾರು ಮಾಡುವರು ಶ್ರೀಕಾಂತ| ಗುಣ ಗುಣಗಳೊಳಗಿಪ್ಪ ಬಹು ಗುಣವಂತ ಗುಣ ಬದ್ಧ ನಾಗದಿಹ ಶ್ರೀ ಲಕ್ಷ್ಮೀಕಾಂತ|| ಕ್ಷೀರಾಂಬು ನಿಧಿಯೊಳಗೆ ಸಜ್ಜೆಯೊಳಗಿರುವ ಶ್ರೀ ರಮಣ ಭಕ್ತರಿಚ್ಚೆಗೆ ನಲಿದು ಬರುವ| ಕಾರುಣ್ಯ ಹಯವದನ ಕಾಯ್ವ ತುರುಕರುವ ನೀರೆ ಗೋಪಿಯರೊಳು ಮೆರೆವ ಕಡು ಚೆಲುವ||
ದಾಸ ಸಾಹಿತ್ಯ ಪ್ರಕಾರ
ಬರೆದವರು