ರಾಮ ರಕ್ಷಿಸೋ ಕೋದಂಡಪಾಣಿ

ರಾಮ ರಕ್ಷಿಸೋ ಕೋದಂಡಪಾಣಿ

(ದ್ವಿಜಾವಂತಿ ರಾಗ) ರಾಮ ರಕ್ಷಿಸೋ ಕೋದಂಡಪಾಣಿ ರಾಮ ರಕ್ಷಿಸೋ || ಪ|| ಬಾಲತನದೊಳು ಬಹು ಲೀಲೆಯೊಳಗಿದ್ದೆ ಮೇಲೆ ಯೌವನದಲಿ ನಿಮ್ಮ ಪೂಜಿಸದೆ ಜಾಲ ಸ್ತ್ರೀಯರ ಕೂಡಾಡಿ ಮರುಳಾದೆ ಕಾಲನ ಬಾಧೆಗೆ ನಾನು ಗುರಿಯಾದೆ ||೧|| ಅಜಮಿಳಗೊಲಿದು ಅಂಬರೀಶನ ಕಾಯ್ದೆ ಗಜರಾಜ ದ್ರೌಪದಿಯರ ರಕ್ಷಿಸಿದೆ ಭಜಿಸುವ ಭಕ್ತರ ಪಾಪವ ಹರಿದೆ ಸಿರಿ- ಅಜ ನಿನ್ನ ನೆನೆಯದೆ ನಾ ಮರುಳಾದೆ ||೨|| ಪೊಡವಿಗಧಿಕವೆಂದು ಕಡಬಡಿ ನಿಂದೆ ದೃಢ ಭಕ್ತರನು ಪೊರೆವ ಕರುಣಾಸಿಂಧು ಕಡು ಚೆಲ್ವ ರಾಮಮೂರುತಿ ಗತಿಯೆಂದು ಬಿಡದೆ ನಂಬಿದೆ ನಿನ ಪಾದವ ಬಂದು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು