ಬೃಂದಾವನ ನೋಡಿದೆ

ಬೃಂದಾವನ ನೋಡಿದೆ

ರಚನೆ : ವೆಂಕಟವಿಠಲ ಗಾಯಕಿ : ಸುಲೋಚನ ಬೃಂದಾವನ ನೋಡಿದೆ ರಾಘವೇಂದ್ರರ ಬೃಂದಾವನ ನೋಡಿದೆ ಬೃಂದಾವನ ನೋಡಿ ಚಂದದಿ ದ್ವಾದಶಪುಂಡ್ರಾಕಿಂತಗೊಂಡ ||ಪಲ್ಲವಿ|| ತುಂಗಭದ್ರಾ ನದಿಯ ತೀರದಿ ಇದ್ದು ತುಂಗಾ ಮಂಟಪ ಮಧ್ಯದಿ ಶೃಂಗಾರ ತುಳಸಿ ಪದ್ಮಾಕ್ಷ ಸರಗಳಿಂದ ಮಂಗಳಪರ ಮಹಿಮೆಯಿಂದೊಪ್ಪುವ ||೧|| ದೇಶದೇಶದಿ ಮೆಚ್ಚುತ ಇಲ್ಲಿಗೆ ಬಂದು ವಾಸವಾಗಿ ಸೇವಿಪ ಭಾಷೆ ಕೊಟ್ಟಂದದಿ ಬಹುವಿಧ ವರಗಳ ಸೂಸುವವರ ಮಹಾಮಹಿಮೆಯಿಂದೊಪ್ಪುವ ||೨|| ನಿತ್ಯ ಸನ್ನಿಧಿ ಸೇವಿಪ ಭಕ್ತರಿಗೆಲ್ಲ ಮತ್ತೆ ಅಭೀಷ್ಟವ ಕರೆವ ಸತ್ಯದಿ ಗುಣಸಿಂಧು ವೆಂಕಟವಿಠಲನ ನಿತ್ಯ ಸನ್ನಿಧಿಯಿಂದ ನಿರುತ ಪೂಜೆಗೊಂಬ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು