ಬಾರೋ ಬೇಗ ಬಾರೋ

ಬಾರೋ ಬೇಗ ಬಾರೋ

ಬಾರೋ ಬೇಗ ಬಾರೋ ನೀಲಮೇಘ ವರ್ಣ ಬಾರೋ ಬೇಗ ಬಾರೋ ವೇಲಾಪುರದ ಚೆನ್ನ| ಇಂದಿರೆ ರಮಣ ಗೋವಿಂದ ಬೇಗ ಬಾರೋ ನಂದನಕಂದ ಮುಕುಂದ ಬೇಗ ಬಾರೋ| ರಂಗ ಉತ್ತುಂಗ ನರಸಿಂಗ ಬೇಗ ಬಾರೋ ಮಂಗಳ ಮಹಿಮ ಶುಭಾಂಗ ಬೇಗ ಬಾರೋ| ರುದ್ಧ ಅನಿರುದ್ಧ ನಿರವದ್ಯ ಬೇಗ ಬಾರೋ ಹದ್ದನೇರಿದ ಸುಪ್ರಸಿದ್ಧ ಬೇಗ ಬಾರೋ|| ಧೀರ ಉದಾರ ಗಂಭೀರ ಬೇಗ ಬಾರೋ ಹಾರಾಲಂಕಾರ ರಘುವೀರ ಬೇಗ ಬಾರೋ| ಅಯ್ಯಾ ವಿಜಯ ಸಹಾಯ್ಯ ಬೇಗ ಬಾರೋ ಉದಯಾದ್ರಿವಾಸ ಹಯವದನ ಬೇಗ ಬಾರೋ||
ದಾಸ ಸಾಹಿತ್ಯ ಪ್ರಕಾರ
ಬರೆದವರು