ಬಾರೋ ಕೃಷ್ಣಯ್ಯ

ಬಾರೋ ಕೃಷ್ಣಯ್ಯ

ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ ರಂಗಯ್ಯ |ಪ| ಬಾರೋ ನಿನ್ನ ಮುಖ ತೊರೋ ನಿನ್ನ ಸರಿ ಯಾರೋ ಜಗದರಾಶೀಲನೆ|ಅ.ಪ| ಅಂದುಗೆ ಪಾಡಗವು ಕಾಲಂದುಗೆ ಕಿರು ಗೆಜ್ಜೆ ಧಿಂಧಿಮಿ ಧಿಮಿಧಿಮಿ ಧಿಮಿ ಎನುತ ಪೊಂಗೊಳಲನೂದುತ ಬಾರಯ್ಯ| ಕಂಕಣ ಕರದಲ್ಲಿ ಹೊನ್ನುಂಗುರ ಹೊಳೆಯುತ ಕಿಂಕಿಣಿ ಕಿಣಿಕಿಣಿ ಕಿಣಿರೆನುತ ಪೊಂಗೊಳಲನೂದುತ ಬಾರಯ್ಯ| ವಾಸ ಉಡುಪಿಲಿ ನೆಲೆಯಾದಿಕೇಶವನೆ ದಾಸ ನಿನ್ನ ಪಾದ ದಾಸ ದಾಸ ನಿನ್ನ ಪಾದ ದಾಸ ನಿನ್ನ ಪಾದದಾಸ|
ದಾಸ ಸಾಹಿತ್ಯ ಪ್ರಕಾರ
ಬರೆದವರು