ಪವನ ಸಂಭೂತ ಒಲಿದು ತವಕದಿ ಕಾಯಬೇಕು

ಪವನ ಸಂಭೂತ ಒಲಿದು ತವಕದಿ ಕಾಯಬೇಕು

ಪವನ ಸಂಭೂತ ಒಲಿದು ತವಕದಿ ಕಾಯಬೇಕು ಇವನಾರೋ ಎಂದು ಉದಾಸೀನ ಮಾಡದಲೆನ್ನ ||ಪಲ್ಲವಿ|| ಕಪಿಪ ಕಪಿ ಆಜ್ಞೆಯಂತೆ ಕಪಿಲನ ಪತ್ನಿಯನ್ನು ಕಪಿಗಳು ಹುಡುಕಿ ಮಿಡುಕಲು ಕಾಯ್ದೆ ಆಗಲು ||೧|| ಹರಿವೇಷಧರನೆ ನರಹರಿ ಭಕುತರ ಪೊರೆವುದಕ್ಕೆ ಹರಿಯಂತೆ ಒದಗುವೆಯೊ ನೀನು ಹರಿದಾಸನು ನಾನು ||೨|| ಅಜಸುತನ ಶಾಪದಿಂದ ಅಜಗರನಾದವನ ಪಾದ| ರಜದಿ ಪುನೀತನ ಮಾಡಿದನೇ, ಅಜ ಪದವಿಗೆ ಬಹನೇ ||೩|| ಕಲಿಯುಗದಿ ಕವಿಗಳೆಲ್ಲ ಕಲಿಬಾಧೆಯಿಂದ ಬಳಲೆ| ಕಲಿವೈರಿಮುನಿಯೆಂದೆನಿಸಿದಿ, ಕಲಿಮಲವ ಕಳೆದಿ ||೪|| ಗುರು ಪ್ರಾಣೇಶ ವಿಠಲ ಹರಿ ಪರನೆಂಬೊಜ್ಞಾನ ಗುರುಮಧ್ವರಾಯ ಕರುಣಿಸೊ ದುರ್ಮತಿಗಳ ಬಿಡಿಸೊ ||೫||
ದಾಸ ಸಾಹಿತ್ಯ ಪ್ರಕಾರ