ನೋಡಿ ಮರುಳಾಗದಿರು ಪರಸತಿಯರ

ನೋಡಿ ಮರುಳಾಗದಿರು ಪರಸತಿಯರ

ನೋಡಿ ಮರುಳಾಗದಿರು ಪರಸತಿಯರ || ಪಲ್ಲವಿ || ನಾಡೊಳಗೆ ಕೆಟ್ಟವರ ಪರಿಯ ನೀನರಿತು || ಅನುಪಲ್ಲವಿ || ಶತ ಮಖವನೆ ಮಾಡಿ ಸುರಸಭೆಗೈದ ನಹುಷ ತಾ ಆತುರದಿ ಶಚಿಗೆ ಮನಸೋತು ಭ್ರಮಿಸಿ ಅತಿ ಬೇಗ ಚಲಿಸಂದು ಬೆಸಸಲಾ ಮುನಿಯಿಂದ ಗತಿಗೆಟ್ಟು ಉರಗನಾಗಿದ್ದ ಪರಿಯ ನೀನರಿತು || ೧ || ಸುರಪತಿಯು ಗೌತಮನ ಸತಿಗಾಗಿ ಕಪಟದಿಂ ಧರೆಗೆ ಮಾಯವೇಷ ಧರಿಸಿ ಬಂದು ಪರಮ ಮುನಿಶಾಪದಿಂ ಅಂಗದೊಳು ಸಾ ವಿರ ಕಣ್ಣಾಗಿ ಇದ್ದ ಪರಿಯ ನೀನರಿತು || ೨ || ಸ್ಮರನ ಶರತಾಪವನು ಪರಿಹರಿಸಲರಿಯದಲೆ ದುರುಳ ಕೀಚಕನು ದ್ರೌಪದಿಯ ಕೆಣಕಿ ಮರುತಸುತ ಭೀಮನಿಂದಿರುಳೊಳಗೆ ಹತನಾದ ನರಕುರಿಯೆ ನಿನ್ನ ಪಾಡೇನು ಧರೆಯೊಳಗೆ || ೩ || ಹರನ ವರವನು ಪಡೆದು ಶರಧಿಮಧ್ಯದೊಳಿದ್ದು ದುರುಳ ದಶಶಿರನು ಜಾನಕಿಯನೊಯ್ಯೆ ಧುರದೊಳಗೆ ರಘುವರನ ಶರದಿಂದ ಈರೈದು ಶಿರಗಳನೆ ಹೋಗಾಡಿಸಿಕೊಂಡ ಪರಿಯ ನೀನರಿತು || ೩ || ಇಂಥಿಂಥವರು ಕೆಟ್ಟು ಹೋದವರೆಂಬುದನರಿತು ಭ್ರಾಂತಿಯನೆ ಬಿಟ್ಟು ಭಯಭಕ್ತಿಯಿಂದ ಅಂತರಾತ್ಮಕ ಕಾಗಿನೆಲೆಯಾದಿ ಕೇಶವನ ನಿ ರುತವು ನೀ ಭಜಿಸಿ ಸುಖಿಯಾಗೊ ಮನುಜ || ೪ ||
ದಾಸ ಸಾಹಿತ್ಯ ಪ್ರಕಾರ
ಬರೆದವರು