ನೆನೆವೆನನುದಿನ

ನೆನೆವೆನನುದಿನ

ನೆನೆವೆನನುದಿನ ನೀಲನೀರದ ವರ್ಣನ ಗುಣ ರನ್ನನ ||ಪಲ್ಲವಿ|| ಮುನಿಜನಪ್ರಿಯ ಮುದ್ದು ಉಡುಪಿನ ರಂಗನ ದಯಾಭರಿತನ ||ಅನುಪಲ್ಲವಿ|| ದೇವಕೀಜಠರೋದಯಾಂಬುಧಿ ಚಂದ್ರನ - ಗುಣ ಸಾಂದ್ರನ ಗೋವಜ್ರಕೆ ಘನ ಯಮುನೆ ದಾಟಿ ಬಂದನ - ಅಲ್ಲಿ ನಿಂದನ ಮಾವ ಕಳುಹಿದ ಮಾಯಾ ಶಟವಿಯ ಕೊಂದನ - ಚಿದಾನಂದನ ದೇವರಿಪು ದೈತ್ಯೇಂದ್ರ ಶಕಟನ ಒದ್ದನ - ಶ್ರುತಿ ಸಿದ್ಧನ ಗೋಕುಲದ ಗೋಪಿಯರ ವಂಚಕ ಚೋರನ - ಬಹು ಧೀರನ ಅನೇಕ ನಾರಿಯರ್ವಸನವನು ಕ ದ್ದೊಯ್ದನ - ತುರುಗಾಯ್ದನ ನಾಕಿಯರಿಗರಿ ಧೇನುಕ ವತ್ಸವಿ ಘಾತನ - ವಿಖ್ಯಾತನ ಕಾಕುಮತಿ ಕಾಳಿಂಗನ ಫಣ ತುಳಿದನ - ಅವಗೊಲಿದನ ಶೈಲವನು ಅಹಿಶಯನ ಬೆರಳಲಿ ಆಂತನ - ಬಲವಂತನ ಸೋಳಸಾಸಿರ ಬಾಲೆಯರ ಕರ ಪಿಡಿದನ - ಸುಧೆಗುಡಿದನ ಬಾಲೆ ಭಾಮೆಯರೊಡನೆ ಜಲಕ್ರೀಡೆ ಗಿಳಿದನ - ಅಲ್ಲಿ ನಲಿದನ ಲೀಲೆಯಲಿ ಲಲನೆಯರಿಗಿಷ್ಟವ ಕೊಟ್ಟನ - ಸಂತುಷ್ಟನ ಕ್ರೂರ ಬಕ ಕೇಶಿಗಳನ್ನೆಲ್ಲ ಸೀಳ್ದನ - ಸುರರಾಳ್ವನ ಅಕ್ರೂರ ಕರೆಯಲು ಹರುಷದಿಂದಲಿ ಬಂದನ - ಸುರವಂದ್ಯನ ನಾರಿ ಕಬುಜೆಗೆ ಭೂರಿ ಸಂತಸ ವಿತ್ತನ - ಅತಿಶಕ್ತನ ವಾರಣವನು ಕೆಡಹಿದ ಪ್ರತಿ ಮಲ್ಲನ - ಅತಿ ಚೆಲ್ವನ ಸುಲಭದಿಂದಲಿ ಶಿವನ ಧನುವನು ಮುರಿದನ - ನೆರೆ ಮೆರೆದನ ಮಲೆತ ಮಲ್ಲರ ಕೆಡಹಿ ರಂಗದಿ ನಿಂತನ - ಜಯವಂತನ ಖಳ ಕುಲಾಗ್ರಣಿ ಕಂಸನೆಂಬನ ಹೊಡೆದನ - ಹುಡಿಗೆಡೆದನ ಬಲದಿ ತಾಯಿ ತಂದೆ ಬಂಧನ ಕಡಿದನ - ಯಶ ಪಡೆದನ ಭುವನ ಪಟ್ಟವನುಗ್ರಸೇನಗೆ ಕೊಟ್ಟನ - ಅತಿ ಶ್ರೇಷ್ಠನ ಯುವತಿಯರಿಗುದ್ಧವನ ಕಳುಹಿದ ಜಾಣನ - ಸುಪ್ರವೀಣನ ವಿವಿಧ ವಿದ್ಯಾಕಲೆಗಳೆಲ್ಲವ ನರಿತನ - ಶುಭ ಚರಿತನ ಜನವ ಶಿಕ್ಷಿಸಿ ದ್ವಿಜನ ಕಂದನ ತಂದನ - ಆನಂದನ ಸುಮತಿ ಖಳಮಾಗಧನ ಯುದ್ಧದಿ ಗೆದ್ದನ - ಅನವದ್ಯನ ದುಮಣಿ ಸಮ ದ್ವಾರಕಿಯ ರಚಿಸಿದು ದಾರನ - ಗಂಭೀರನ ಸುಮತಿ ಮುಚುಕುಂದನೊದ್ದ ಯವನನ ಸುಟ್ಟನ - ಅತಿ ದಿಟ್ಟನ ವಿಮಲ ಸುಚರಿತ್ರಾಷ್ಟ ಮಹಿಷಿಯ ರಾಳ್ದನ - ನೆರೆ ಬಾಳ್ದನ ಮುರನರಕ ಮುಖ್ಯರನು ಚಕ್ರದಿ ತಂದನ - ಕರಿವರದನ ಸುರತರುವ ಸತಿಗಾಗಿ ತಂದ ಸ- ಮರ್ಥನ - ಜಗತ್ಕರ್ತನ ದುರುಳ ಶಿಶುಪಾಲಾದಿ ದೈತ್ಯ ಸಂ- ಹಾರನ - ಬಹುಶೂರನ ಕುರುಕುಲಕೆ ಲಯವಿತ್ತ ಪಾಂಡವ ಪ್ರೀಯನ - ಕವಿಗೇಯನ ಇಂತು ಇಳೆಯ ಸುಜನರ ಸಲಹುವ ಕಾಂತನ - ಸಿರಿವಂತನ ಪಂಥವುಳ್ಳ ಪ್ರಸನ್ನ ಹಯವ- ದನನ - ಮುನಿಮಾನ್ಯನ ಸಂತತವೀ ಸಾರಕಥೆಯನು ಕೇಳ್ವರ - ನೆರೆಬಾಳ್ವರ ಕಂತುಷಿತ ಕಾರುಣ್ಯದಿಂದಲಿ ಪೊರೆವನು - ಸುಖಗರೆವನು
ದಾಸ ಸಾಹಿತ್ಯ ಪ್ರಕಾರ
ಬರೆದವರು