ನೀಲಗುದುರೆಯನ್ನೇರಿ...

ನೀಲಗುದುರೆಯನ್ನೇರಿ...

ಧ್ರುವತಾಳ ನೀಲಗುದುರೆಯನ್ನೇರಿ ಶಾಲು ಸೊಂಟಕ್ಕೆ ಸುತ್ತಿ ಕಾಲುಕುಪ್ಪಸ ತೊಟ್ಟು ಮೇಲೆ ಮೋಹನ್ನ ಹಾಕಿ ಓಲ್ಯಾಡಿಸುತ್ತ ಒಂಟಿ ಢಾಳಾಗಿ ಶೋಭಿಸಲು ಸಾಲು ಬೆರಳುಂಗುರ ಕೈಲಿ ಖಡ್ಗವ ಪಿಡಿದು ತೋಳು ತಾಯಿತ ಶಿರಕೆ ಮೇಲಾದ ವಸ್ತ್ರ ಸುತ್ತಿ ಫಾಲ ಕಸ್ತೂರಿನಿಟ್ಟು ಮೈಲಿ ಗಂಧವ ಪೂಸಿ ಪಾಲಾಯನದಿ ಅಶ್ವವನೇರಿ ಓಲ್ಯಾಡಿಸುತ್ತ 'ಆಲೆನಾಹಿ' ಎಂದು ಕೇಳಿದವನಾರವ್ವ ವೇಳೆ ಸಾಲದ್ಹೋಯಿತು ಕೇಳುವುದಕ್ಕೆನಗೆ ಹೇಳುವುದಕ್ಕೆ ವಚನಗದ್ಗದದಿ ಏಳದು ವಚನ ಉಚ್ಚರಿಸುವೆನೆನಲು ಆಲೋಚನೆಗೆ ಅತಿ ವಿಚಿತ್ರವು ಕೇಳಿಲ್ಲ ಕಂಡಿಲ್ಲ ಇಂಥ ಪುರುಷನ್ನ ಎಂದೂ ಕಾಳಗತ್ತಲು ಅಲ್ಲ ಅತ್ತ ನೋಡು ಹಗಲು ಕೇಳು ತಗ್ಗು ಮಿಟ್ಟೆ ಮೇಲೆ ಮಂಜುರವಲ್ಲ ಹೇಳಲೇನಿದು ಒಂದು ಸೋಜಿಗವು ಕಾಲು ಏಳವು ಮುಂದೆ ನಡೆಯಲು ಎನಗಿನ್ನು ಆಲೋಚನೆಯೆಲ್ಲ ಅತ್ತಲಾಗಿ ಎನ್ನ ಕೇಳಿದನಲ್ಲೆ ಅರೆ ಮಾತಿನಿಂದಲಿ ಎನ್ನ ಹೇಳುವ ಪುರುಷನು ಆವನಾಗುವನು ಆಲೋಚನೆಗೆ ಎನಗೆ ತೋರುತಲಿದೆ ತುಲಸಿ- ಮಾಲೆ ಪರಿಮಳಗಂಧ ಕುರುಹದಿಂದ ಶೀಲಮೂರುತಿ ಪಂಡರಿರಾಯ ಗೋಪಾಲವಿಠಲ ಓಲ್ಯಾಡಿ ಕುದುರೆ ಓಲ್ಯಾಡಿಸುತ್ತ ಪೋದನಲ್ಲೆ ಮಠ್ಯ ತಾಳ ಕಂಡಿರ್ಯಾ ಕಂಡಿರ್ಯಾ ಖಂಡವ್ಯಾಪುತನಿವ ಕಂಡಿರ್ಯಾ ಕಂಡಿರ್ಯಾ ಬೊಮ್ಮಾಂಡದೊಡೆಯನ ಕಂಡಿರ್ಯಾ ಕಂಡಿರ್ಯಾ ಅಜಭವಾದಿಗಳ ತೊಂಡರ ಮಾಡಿ ಬಿಡದಖಂಡ ಪೊರೆವವನ ಕಂಡಿರ್ಯಾ ಕಂಡಿರ್ಯಾ ಸರ್ವ ಜೀವರ ಪಶು- ಹಿಂಡು ಮಾಡಿ ಬಿಡದೆ ಕಾಯುವ ಗೋಪಾಲನ ಕಂಡಿರ್ಯಾ ಕಂಡಿರ್ಯಾ ಮಣಿಮೌಳಿ ಮಲ್ಲಿಗೆ ದಂಡೆಯ ಮಂಡೆಯು ಶೋಭಿಸೆ ಮುದ್ದು ಮೊಗದ ಚೆಲುವ ಪುಂಡರೀಕದಳನಯನ ಕಸ್ತೂರಿ ತಿಲಕ ಕುಂಡಲಕರ್ಣ ಕಪೋಲ ತತ್ತಳಿಸುತ್ತ ಪುಂಡರೀಕ ತುಳಸಿದಂಡೆಯ ಕೊರಳೊಲಿಯೆ ಚಂಡು ಬುಗುರಿ ಚಿಣ್ಣಿಗೋಲುಗಳಾಡುತ್ತ ಪುಂಡರೀಕನ ಭಕ್ತಿಗೊಲಿದು ಬಂದು ನಿಂದ ಪಂಢರಪುರಿರೇಯ ಗೋಪಾಲವಿಠಲನ್ನ ಕಂಡಿರ್ಯಾ ಕಂಡಿರ್ಯಾ ಕಪಟನಾಟಕ ಹರಿಯ ರೂಪಕತಾಳ ಆವ ರೋಪದಲ್ಲೆ ಗೋವು ಕಾಯಿದ ರೂಪ ಆವ ಈ ರೂಪವೆ ಮತ್ಸ್ಯಾದಿ ರೂಪವು ಆವ ಈ ರೂಪವೇ ಅಜಾದಿ ರೂಪವು ಆವ ಈ ರೂಪವೇ ಆತ್ಮಾದಿ ರೂಪವು ಆವ ಈ ರೂಪವೇ ಅನಂತಾತ್ಮಕ ಶ್ರೀವಿಷ್ಣು ರೂಪವು ಮತ್ತಿವನೆ ಸಾಕ್ಷಾತು ನೋಡಾ ಈ ವಿಧ ರೂಪವು ಅನಂತಾನಂತವಿರಲು ಆವ ರಾಹುತನಂತೆ ಅಶ್ವವೇರಿ ಎನ್ನ ಈ ವಿಧದಲ್ಲಿ ಎನ್ನ ಕಾವಳಗೊಳಿಸಿದುದು ಏನೊ ನಾವೊಂದರಿತವನಲ್ಲ ನಿನ್ನ ಲೀಲೆ ಆವ ಬಗೆಯೊ ನಾನರಿಯೆ ಈ ವಿಧ ತೋರಿದ್ದು ಸೇವಕಜನ ಸ್ಥಿತಿ ನೀನೆ ಬಲ್ಲೆ ಗೋವರ್ಧನೋದ್ಧಾರ ಗೋಪಾಲವಿಠಲ ದೇವ ಪಂಢರಿರಾಯ ಶ್ರೀ ವಿಜಯದಾಸರ ಪ್ರೀಯ ಝಂಪೆ ತಾಳ ನೋಡಿದಂತೆನ್ನನು ನೋಡುತಿದ್ದರೆ ಕೊನೆಗೆ ಮಾಡಿಕೊಂಬೆ ಮನಕೆ ಆವ ನಾಥನೆಂದು ನೋಡಿದಾಕ್ಷಣದಲ್ಲಿ ಕಾಣದ್ಹೋದುದರಿಂದ ನೋಡಬೇಕಾಯಿತು ಆವವನೊ ಎಂದು ನೋಡನೋಡಾ ಅದೃಶ್ಯನಾದ ಕಾರಣ ಮನಕೆ ನೋಡು ಎಂತಿಪ್ಪದು ನೋಡುವರಿಗೆ ಆಡುವ ಮಾತಲ್ಲ ಕಂಡುಕಂಡಂತಿನ್ನು ನೋಡಬಾರದೆ ಒಂದು ಘಳಿಗೆ ನಿಂತು ನೋಡಿದಾಕ್ಷಣ ನಿಂದು ಬೇಡುವದಿನ್ನೇನು ನೋಡೊ ಯೋಗ್ಯತೆಯರಿತು ನೋಡು ದೊರೆಯೆ ಆಡಿದ್ದೆಲ್ಲ ಬರಲಿ ಇಲ್ಲವೆಂದು ಎನ್ನ ನೋಡು ಆವಸ್ಥಳಕೆ ಬರಲಿ ನಾನು ನೋಡು ತಿಳಿಯದು ಸ್ವಾಮಿ ಗೋಪಾಲವಿಠಲ ನೋಡು ಪಂಢರಿರಾಯ ಮಾಡು ದಯವ ತ್ರಿಪುಟತಾಳ ಆವದೇಶಕೆ ಬರಲಿ ಆವ ಕ್ಷೇತ್ರವ ನೋಡಲಿ ಆವ ಸಂಗವ ಬಿಡಲಿ ಆವ ಸಂಗವ ಪಿಡಿಯಲಿ ಆವ ವ್ರತಗಳ ಮಾಡಲಿ ಆವ ಶ್ರವಣವ ಕೇಳಲಿ ಆವ ಧೈರ್ಯವು ಇರಲಿ ಆವುದಾವುದು ತಿಳಿಯಲಿ ಆವ ಸಾಧನ ಮಾಡಲಿ ಆವುದಾವುದು ಕೊಡಲಿ ಆವುದಾವುದು ಉಣಲಿ ಆವುದಾವುದು ಹೊದೆಯಲಿ ಆವುದಾವುದು ನೋಡಲಿ ಆವುದಾವುದು ಬಿಡಲಿ ಆವುದಾವುದು ತಡೆಯಲಿ ಆವುದಾವುದು ಜಡಿಯಲಿ ಆವುದಾವುದರ್ಚಿಸಲಿ ಆವುದಾವುದು ಕೇಳಲಿ ಆವುದಾವುದು ನುಡಿಯಲಿ ಆವುದಾವುದು ಜಪಿಸಲಿ ದೇವ ನೀನಲ್ಲದಿಲ್ಲ ಇದರೊಳಗೊಂದು ಆವಲ್ಲಿಗೊ ನಾನರಿಯೆ ಬರಹೇಳಿದ್ದು ಎನ್ನ ಪಾವನ್ನ ಮಾಳ್ಪ ಶಕ್ತ ನೀನೆ ಎನ್ನ ಆವಲ್ಲಿದ್ದರು ಎನಗೆ ಅನುಭೋಗ ಈಗಲೆ ಕಾವಲಿ ಬಹು ಇರಲಿ ಕಾಕುಜನರಿಂದ ಬಲ್ಲ ಸೊಲ್ಲಿಗೆ ಮ- ನವಯ್ದು ವಶವ ಮಾಡಲಿಬ್ಯಾಡ ನಾವೊಬ್ಬನೆ ನಿನ್ನ ಪೊಂದಿನಡೆವ ಸಿ- ರಿ ವಿಜಯದಾಸರ ಸಹವಾಸದಲ್ಲಿಪ್ಪ ಜೀವರುಗಳಿಗೆಲ್ಲ ನೋವು ಎಂಬುದು ಬ್ಯಾಡ ದೇವ ಪಂಢರಿರಾಯ ಗೋಪಾಲವಿಠಲ ನೀ ವಲಿದುದಕಿಂದು ಈ ವರವ ನೀಡು ಅಟ್ಟತಾಳ ಶರಣು ಗೋವಳರಾಯು ಶರಣು ನಿರ್ಜಿತ ಮಾಯ ಶರಣು ಮುಕ್ತಾಶ್ರಯ ಶರಣಾನಂದಮಯ ಶರಣು ದೋಷವಿದೂರ ಶರಣು ನಿರ್ವಿಕಾರ ಶರಣು ಭಕ್ತರಪಾಲ ಶರಣು ಲೀಲಾವತಾರ ಶರಣು ಅವ್ಯಕ್ತಕಾಯ ಶರಣಪ್ರಾಕೃತಕಾಯ ಶರಣು ಜ್ಞಾನಪೂರ್ಣ ಶರಣು ಮೂಲಕಾರಣ ಶರಣು ಅಖಂಡೇಶ ಶರಣು ಅನಾದಿದೇವ ಶರಣು ನಿತ್ಯತೃಪ್ತ ಶರಣು ನಿರಂಜನ ಶರಣು ಅಘಟಿತಘಟಿತಾನಂತ ಐಶ್ವರ್ಯ ಶರಣು ಅಗಮ್ಯ ಅಲೌಕಿಕ ಐಶ್ವರ್ಯ ಶರಣು ಮಹಾಪ್ರಭೊ ಹೇ ರಾಜಾಧಿರಾಜ ಶರಣು ಅಯ್ಯ ಅಯ್ಯ ಪೂತುರೆ ಪೂತುರೆ ಶರಣು ಪಂಡರಿರಾಯ ಗೋಪಾಲವಿಠಲ ಶರಣು ಶರಣು ನಿನ್ನ ಪರಿವಾರಸಹ ನಿತ್ಯ ಆದಿತಾಳ ಮಾನಿಸರೂಪದಿ ಮಹಿಮೆಯ ತೋರ್ಪನೆ ಮಾನಿಸರೂಪದಿ ಮನೆಮನೆ ಪೊಕ್ಕನೆ ಮಾನಿಸರೂಪದಿ ಮಣ್ಣನೆ ಮೆದ್ದನೆ ಮಾನಿಸರೂಪದಿ ಮುನಿಮನ ಸೆಳೆದನೆ ಮಾನಿಸರೂಪಾಗಿ ಮಾನಿನಿಗೊಲಿದನೆ ಮಾನಿಸರೂಪಾಗಿ ದನುಜರ ಕೊಂದನೆ ಮಾನಿಸರೂಪಾಗಿ ಧನುವನ್ನು ಮುರಿದನೆ ಮಾನಿಸದೃಷ್ಟಿಗೆ ಮನುಷ್ಯನಂತೆ ಅ- ಮಾನುಷ್ಯ ಮಹಿಮನೆ ಮರೆಮೋಸ ಮಾಡೋದು ಮಾನಿತವೇನಯ್ಯ ಮಾನವಂತನೆ ಹೀಗೆ ಮಾನಿಸಾನ್ನವನುಂಬ ಮನುಜನಾದುದರಿಂದ ಮನುಷ್ಯನಂತೆ ನಿನ್ನ ಮನದಿ ನಿಶ್ಚೈಸಿದೆ ಮಾನಗುಣಾಂಬುಧಿ ಗೋಪಾಲವಿಠಲ ಮನಸಾವಾಚಾಕಾಯಾ ಮೊರೆಹೊಕ್ಕೆ ಮನ ನೀಡೋ ಜತೆ ಎಲ್ಲಿ ನೋಡಲು ಮತ್ತಲ್ಲಿ ನೀನಿರೆ ಬರ- ಲಿಲ್ಲವೆಂಬುದೇನೋ ಗೋಪಾಲವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು