ನಾನು ನೀನು ಎನ್ನದಿರೊ ಹೀನ ಮಾನವ

ನಾನು ನೀನು ಎನ್ನದಿರೊ ಹೀನ ಮಾನವ

( ಭೈರವಿ ರಾಗ ಮಟ್ಟತಾಳ) ನಾನು ನೀನು ಎನ್ನದಿರೊ ಹೀನ ಮಾನವ ಜ್ಞಾನದಿಂದ ನಿನ್ನ ನೀನೆ ತಿಳಿದು ನೋಡೆಲೊ ಪ್ರಾಣಿ ||ಪ|| ಹೆಣ್ಣು ಹೊನ್ನು ಮಣ್ಣು ಮೂರು ನಿನ್ನದೇನೆಲೊ ಅನ್ನದಿಂದ ಬಂದ ಕಾಮ ನಿನ್ನದೇನೆಲೊ ಕರ್ಣದಿಂದ ಬರುವ ಘೋಷ ನಿನ್ನದೇನೆಲೊ ನಿನ್ನ ಬಿಟ್ಟು ಹೋಹ ಜೀವ ನಿನ್ನದೇನೆಲೊ ||೧|| ಹಲವು ಜನ್ಮದಲಿ ಬಂದಿರ್ವನು ನೀನೆಲೋ ಮಲದ ಗರ್ಭದಲಿ ನಿಂದಿರುವನು ನೀನೆಲೋ ಜಲದ ದಾರಿಯಲ್ಲಿ ಬಂದಿರುವನು ನೀನೆಲೋ ಕುಲವು ಜಾತಿ ಗೋತ್ರಗಳುಳ್ಳವನು ನೀನೆಲೋ ||೨|| ಕಾಲ ಕರ್ಮ ಶೀಲ ನೇಮ ನಿನ್ನದೇನೆಲೋ ಜಲ ವಿದ್ಯೆ ಬಯಲ ಮಾಯೆ ನಿನ್ನದೇನೆಲೋ ಕೀಲು ಜಡಿದ ನರದ ಬೊಂಬೆ ನಿನ್ನದೇನೆಲೋ ಲೋಲ ಆದಿಕೇಶವನ್ನ ಭಕ್ತನಾಗೆಲೋ ಪ್ರಾಣೀ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು