Skip to main content

ತುಂಗ ಭುಜಂಗನ ಫಣಿಯಲಿ ಕುಣಿದನು

ತುಂಗ ಭುಜಂಗನ ಫಣಿಯಲಿ ಕುಣಿದನು || ಪ ||
ಮಂಗಳ ಮೂರುತಿ ರಂಗ ಶ್ರೀ ಕೃಷ್ಣನು || ಅ.ಪ. ||

ಕಿಣಿ ಕಿಣಿ ತಾಳ ಝೇಂಕರಿಸುವ ತಂಬೂರಿ
ಕಣ ಕಣವೆಂಬ ಸುನಾದ ಮೃದಂಗವ
ಝಣಿ ಝಣಿಸುವ ಕಂಜರಿ ನಾದಗಳನು
ಅನುಸರಿಸುತ ಧಿಕ್ಕಿಟತ ಧಿಕ್ಕಿಟ ಎಂದು

ಗಗನವ ತುಂಬಿ ತುಂಬುರು ಗಂಧರ್ವರು
ಶಹನ ಅಠಾಣ ಶಂಕರಾಭರಣಗಳಿಂದ
ಸೊಗಸಿನಿಂದಲಿ ಗುಣಗಾನವ ಮಾಡಲು
ನಗಧರ ಕೃಷ್ಣನು ನಗು ಮೊಗದಿಂದಲಿ

ಪನ್ನಗ ಸತಿಯರು ಚಿನ್ನರ ತವಕದಿ
ಸನ್ನುತಿಸುತ ಆರತಿಯ ಬೆಳಗುತಿರೆ
ಉನ್ನತ ಗಗನದಿ ಸುಮನಸರೆಲ್ಲ ಪ್ರ
ಸನ್ನ ಹರಿಗೆ ಸುಮಮಳೆಗರೆಯುತಲಿರೆ

ದಾಸ ಸಾಹಿತ್ಯ ಪ್ರಕಾರ: 
ಬರೆದವರು: