Skip to main content

ಗಾಳಿಗಿಕ್ಕಿದ ದೀವಿಗೆಯಂತೆ ದೇಹ

ಗಾಳಿಗಿಕ್ಕಿದ ದೀವಿಗೆಯಂತೆ ದೇಹವೆಂದು

ವೇಳೆವೇಳೆಗೆ ಶ್ರುತಿ ಸ್ಮೃತಿ ಸಾರುತಲಿವೆ

ಹಾಳುಹರಟೆಯಿಂದ ಫಲವೇನು ಇಲ್ಲ

ನಾಲಿಗೆ ಇದ್ದು ನಾರಾಯಣೆನ್ನಬಾರದೆ

ಕಾಲಕಾಲಕೆ ಹರಿಯ ಕಲ್ಯಾಣಗುಣಗಳ

ಕೇಳದವನ ಜನ್ಮವ್ಯರ್ಥ ಶ್ರೀ ರಾಮಕೃಷ್ಣ

ಹಾಳುಹರಟೆಯಿಂದ ಫಲವೇನು ಇಲ್ಲ----ಬಡೇಸಾಹೇಬರು

 

ದಾಸ ಸಾಹಿತ್ಯ ಪ್ರಕಾರ: 
ಬರೆದವರು: