ಕೃಷ್ಣ ಪಾಲಿಸೋ ಶ್ರೀ ಶಾರ್ಙ್ಗಪಾಣಿ

ಕೃಷ್ಣ ಪಾಲಿಸೋ ಶ್ರೀ ಶಾರ್ಙ್ಗಪಾಣಿ

(ಭೈರವಿ ರಾಗ ಆದಿತಾಳ) ಕೃಷ್ಣ ಪಾಲಿಸೋ ಶ್ರೀ ಶಾರ್ಙ್ಗಪಾಣಿ ||ಪ|| ಮಾತೆ ಉದರದೊಳತಿ ತಾಪದೊಳಿರ್ದೆ ರೀತಿಯ ಮರೆತು ನಾನಳುತ ಬಿದ್ದಿರ್ದೆ ಕಾತುರದಲಿ ಕುಣಿದಾಡಿ ನಗುತಿರ್ದೆ ಈ ತೆರನಾಗಿ ನಾ ಬಾಲನಾಗಿದ್ದೆ ||೧|| ಮುಂಜಿ ಮದುವೆಯಾಗಿ ಸಂಭ್ರಮದಿಂದ ಅಂಜಿಕೆಯು ಇಲ್ಲದೆ ತಿರುಗುತ್ತ ಮುದದಿ ಸಂಜೆ ವೇಳೆಯಲಿ ಸೂಳೆಯರ ಗೃಹದಿ ರಂಜಿಪ ಲೀಲೆಯೊಳು ಕಾಲವ ಕಳೆದೆನು ||೨|| ಚಿಂತೆ ಪಡುತ ನಾ ಚಿರಕಾಲವಿದ್ದೆ ಶ್ರಾಂತಿಯಿಲ್ಲದೆ ಸುತ್ತಿ ಸಾಯುತಲಿದ್ದೆ ಶಾಂತನಾದೆ ವೈಕುಂಠ ನಗರೀಶ ಭ್ರಾಂತಿಯ ಬಿಟ್ಟೆನೈ ಕಾಯೋ ಜಗದೀಶ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು