ಒಲಿದೆ ಯಾತಕಮ್ಮಾ ಲಕುಮಿ?

ಒಲಿದೆ ಯಾತಕಮ್ಮಾ ಲಕುಮಿ?

ಒಲಿದೆ ಯಾತಕಮ್ಮಾ ಲಕುಮಿ ವಾಸುದೇವಗೆ? ಹಲವಂಗದವನ ಹವಣೆ ತಿಳಿದೂ ತಿಳಿದೂ ತಿಳಿಯದ ಹಾಗೆ! || ಒಲಿದೆ ಯಾತಕಮ್ಮಾ ಲಕುಮಿ?|| ಕಮಲಗಂಧಿ ಕೋಮಲಾಂಗಿ ಸುಂದರಾಬ್ಜವದನೆ ನೀನು ರಮಣ ಮತ್ಸ್ಯ ಕಠಿಣಕಾಯ ಸೂಕರಾಸ್ಯನು ರಮಣೀಯ ಸ್ವರೂಪಿ ನೀನು ಅಮಿತಘೋರ ರೂಪನವನು ನಮಿಪರಿಷ್ಟದಾನಿ ನೀನು ದಾನವ ಬೇಡುವವನಿಗೆ || ಒಲಿದೆ ಯಾತಕಮ್ಮಾ ಲಕುಮಿ?|| ಲಲಿತೆ ಚಾರುಶೀಲೆ ನೀನು ಕಲ್ಕಿ ಕಲಹಪ್ರಿಯನವನು ಕುಲದ ಕುರುಹು ಇಲ್ಲ ಗುಣದ ನೆಲೆಯು ಕಂಡಿಲ್ಲ ಹಲವು ಕಾಲದವನು ಅವನ ಬಂಧು ಬಳಗ ನಿಷ್ಕಿಂಚನರು ಜಲಧಿ ಆಲದೆಲೆಯ ಮೇಲೆ ಮಲಗಿ ಬೆರಳ ಚೀಪುವವನಿಗೆ || ಒಲಿದೆ ಯಾತಕಮ್ಮಾ ಲಕುಮಿ?|| ಸ್ವರತಾನಪೇಕ್ಷಾಕಾಮಿ ನಿದ್ರಾಹೀನ ಅನಶನಿಯು ಪರುಷರೂಪ ವಾಚ್ಯ ಶಬ್ದ ಅಮಿತ ಭೋಕ್ತನು ಗುರುಗೋಪಾಲ ವಿಠ್ಠಲನು ನಿರುತ ತನ್ನ ವಕ್ಷದೊಳು ಅರಮನೆಯ ಮಾಡಿಕೊಂಡು ಮರುಳು ಮಾಡಿದ ಮಾಯಾವಿಗೆ ||ಒಲಿದೆ ಯಾತಕಮ್ಮಾ ಲಕುಮಿ|| (ಗುರುಗೋಪಾಲವಿಟ್ಠಲ ಅನ್ನುವುದು ದಾಸಪ್ಪ ದಾಸರ ಅಂಕಿತ. ಶೈಲಾಸ್ವಾಮಿಯವರು ಗೋಪಾಲದಾಸರ ಬಗ್ಗೆ ಬರೆದಿರುವ ಬರಹದಲ್ಲಿ ಈ ಮಾಹಿತಿ ನನಗೆ ಸಿಕ್ಕಿತು)
ದಾಸ ಸಾಹಿತ್ಯ ಪ್ರಕಾರ