Skip to main content

ಏನು ಮರುಳಾದೆವ್ವ ಎಲೆ ಭಾರತಿ

ರಾಗ: ಹಂಸಧ್ವನಿ ತಾಳ: ಝಂಪೆ

ಏನು ಮರುಳಾದೆವ್ವ ಎಲೆ ಭಾರತೀ | ನೀನರಿಯೆ ಪವನನಿಂಥವನೆಂದು |ಪ|

ಕಲ್ಲು ಹೊರುವನು ಮತ್ತೆ ಯಾರಿಂದಲಾಗದವು | ಎಲ್ಲರಂತಲ್ಲ ಕಪಿರೂಪ ನೋಡು
ಖುಲ್ಲ ಫಲಪುಷ್ಪಯುಕ್ತ ವನವನು ಕೆಡಿಸಿದನು | ಎಲ್ಲಿಂದ ಒದಗಿದನು ಈ ಪತಿಯು ನಿನಗೆ

ರಕುತವಂ ಪಾನ ಮಾಡಿದನಂತೆ ಕೇಳಿದೆಯಾ | ರಕ್ಕಸೊಬ್ಬಳು ನಿನಗೆ ಸವತಿ ಇಹಳು
ಮಕ್ಕಮಾರಿ ಮಗನುಂಟು ಗಂಡನು ಓದ | ನಕ್ಕೆ ಗತಿಯಿಲ್ಲದಲೆ ಭಿಕ್ಷೆ ಬೇಡುವವನಿಗೆ

ಹುಟ್ಟು ಬಡವ ತಾನಾದರೇನಾಗಲಿ | ನಿನ್ನ ಬಿಟ್ಟು ತುರ್ಯಾಶ್ರಮವ ಧರಿಸಿಕೊಂಡು
ದೃಷ್ಟಿಗೋಚರನಾಗದೆ ನರರಿಗೆ | ಪ್ರಾಣೇಶವಿಠ್ಠಲನ ಬಳಿಯಲ್ಲಿ ಬದರಿಯೊಳು ಸೇರಿದವನಿಗೆ

ದಾಸ ಸಾಹಿತ್ಯ ಪ್ರಕಾರ: 
ಬರೆದವರು: