Skip to main content

ಏನು ಇಲ್ಲದ(/ಇಲ್ಲವೋ) ಎರಡು ದಿನದ ಸಂಸಾರ

---------ರಾಗ ಮುಖಾರಿ ಮತ್ತು ರೇಗುಪ್ತಿ ಝಂಪೆತಾಳ

ಏನು ಇಲ್ಲದ(/ಇಲ್ಲವೋ) ಎರಡು ದಿನದ ಸಂಸಾರ
ಜ್ಞಾನದಲಿ ದಾನಧರ್ಮವ ಮಾಡಿರಯ್ಯ ||ಪ||

ಹಸಿದು ಬಂದವರಿಂಗೆ ಅಶನವೀಯಲುಬೇಕು
ಶಿಶುವಿಂಗೆ ಪಾಲ್ಬೆಣ್ಣೆಯನು ನಡೆಸಬೇಕು
ಹಸನಾದ ಭೂಮಿಯನು ಧಾರೆಯೆರೆಯಲುಬೇಕು
ಭಾಷೆ ಕೊಟ್ಟ್ ಬಳಿಕ ನಿಜವಿರಲು ಬೇಕು ||೧||

ಕಳ್ಳತನಗಳ ಮಾಡಿ ಒಡಲು ಹೊರೆಯಲು ಬೇಡ
ಠೌಳಿಗಾರನು ಆಗಿ ತಿರುಗಬೇಡ
ಕುಳ್ಳಿರ್ದ ಸಭೆಯೊಳಗೆ ತಿತ್ಯವ ನಡೆಸಬೇಡ
ಒಳ್ಳೆಯವನೆಂಬ ಉಬ್ಬಲು ಬೇಡ ಮನುಜ ||೨||

ದೊರೆತನವು ಬಂದಾಗ ಕೆಟ್ಟು ನುಡಿಯಲು ಬೇಡ
ಸಿರಿ ಬಂದ ಕಾಲಕ್ಕೆ ಮೆರೆಯಬೇಡ
ಸಿರಿವಂತನಾದರೇ ನೆಲೆಯಾದಿಕೇಶವನ
ಚರಣ ಕಮಲವ ಸೇರಿ ಸುಖಿಯಾಗು ಮನುಜ ||೩||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: