ಎಷ್ಟು ಪೇಳ್ದರು ಬುದ್ಧಿ ಬಾರದೀ ಮನಕೆ

ಎಷ್ಟು ಪೇಳ್ದರು ಬುದ್ಧಿ ಬಾರದೀ ಮನಕೆ

(ಸಾವೇರಿ ರಾಗ ತ್ರಿವಿಡೆ ತಾಳ) ಎಷ್ಟು ಪೇಳ್ದರು ಬುದ್ಧಿ ಬಾರದೀ ಮನಕೆ ಕಷ್ಟ ಬಂದೊದಗಿ ದುಃಖಿಪ ಸಮಯಕಲ್ಲದೆ||ಪ|| ಸತಿಯು ಸುತ ಗೃಹಾದಿಗಳೆಂಬಿರುವ ಸಾಧನದಿ ಮತಿಗೆಟ್ಟು ಮೋಹವನು ಬೆರೆಸಿಕೊಳುತ ಗತಿಯ ಕಾಣದೆ ಕಡೆಗೆ ಅತಿದುಃಖವೆಂಬ ಸಂ- ತತಿಯೊಳಡಗಲು ಮತ್ತೆ ಮತಿ ಬರುವುದಲ್ಲದೆ ||೧|| ಸಾಧು ಸಜ್ಜನರುಗಳು ದಯದೊಳಗೆ ಅರಹುತ್ತಿಹ ಬೋಧೆಗಳಿಗನುಸರಿಸದಂತೆ ನಡೆದು ಹಾದಿ ತಪ್ಪಿ ಕುಣಿಯಲಿ ಬಿದ್ದ ಇಭ*ದಂತೆ ಆದಿತ್ಯ ಸುತ ಬಾಧಿಸುವ ಸಮಯಕಲ್ಲದೆ ||೨|| ಬರಿದೆ ಮಾಯ ಭ್ರಮೆಯೊಳು ಮೆರೆದು ನಿನ್ನಲಿ ನೀನು ಕರಗದೆಯೆ ಅರಿತಿರುವ ಪರಿಯ ಕೇಳು ಪರಕೆ ಪರತರನಾದ ವರದ ಸಿರಿ ನಿತ್ಯಾತ್ಮ ಚರಣ ಸ್ಮರಿಸುತ್ತಿರು ನರಕಕೊಳಗಾಗದೆ ||೩|| ( *ಇಭ=ಆನೆ)
ದಾಸ ಸಾಹಿತ್ಯ ಪ್ರಕಾರ
ಬರೆದವರು