Skip to main content

ಅಟ್ಟಮೇಲೆ ಒಲೆಯು ಉರಿವಂತೆ ಎನಗಿನ್ನು

ಅಟ್ಟಮೇಲೆ ಒಲೆಯು ಉರಿವಂತೆ ಎನಗಿನ್ನು

ಕೆಟ್ಟ ಮೇಲೆ ಬುದ್ಧಿ ಬಂದಿತೀಗ

ಉದ್ದುಕನ್ನಡಿ ಮೇಲೆ ಉರುಳುವೋಲ್ ಷಡ್ವರ್ಗ

ಕೆದ್ದು ಬಿದ್ದೆನು ಬರಿಯ ಗರ್ವದಿಂದ

ಮರುಳಹಂಕಾರದಲಿ ಮಾಯಕ್ಕೆ ಸಿಲುಕಿನ್ನು

ಮರೆತುಬಿಟ್ಟೆನು ನಿನ್ನ ಮಹಿಮೆಯನ್ನು

ಜ್ಞಾನಸುಖ ಪರಿಪೂರ್ಣ ಏನು ಮಾಡಲು ಇನ್ನು

ಶ್ರೀನಿವಾಸನೆ ನಿನ್ನ ದಾಸ ನಾನು

ಸಾರಿದರ ಬಿಡನೆಂಬ ಬಿರುದನುಳುಹೊ

ಆರಿಗಾರಿಲ್ಲ ನೀನಿಲ್ಲದಿನ್ನು

ನೀರಿನೊಳಗದ್ದು ಕ್ಷೀರದೊಳಗದ್ದು

ಭಾರ ನಿನ್ನದು ಕಾಣೊ ಧೀರ ಶ್ರೀಕಾಂತ--ದಾಸರ ಲಕ್ಷ್ಮೀನಾರಾಯಣರಾಯರು

ದಾಸ ಸಾಹಿತ್ಯ ಪ್ರಕಾರ: 
ಬರೆದವರು: