ಪುರಂದರದಾಸ

Compositions of Purandara dasa

ಏನ ಬೇಡಲಿ ನಿನ್ನ ಚಂಚಲ ಕಠಿಣನ

ಏನ ಬೇಡಲಿ ನಿನ್ನ, ಚಂಚಲ ಕಠಿಣನ ಮೌನದಿಂದಲಿ ಮೋರೆ ಓರೆ ಮಾಡುವನ|| ಕರುಳ ಹರಕನ ಬೇಡಲೇನು ತಿರಿದು ತಿಂಬುವನ ಕೊರಳಗೊಯ್ಯ ಅರಣ್ಯ ತಿರುಗುವವವ ತಿರುಗಿ ಬೆಣ್ಣೆ ಕದ್ದು ತಿಂಬುವನ || ವಾಸಶೂನ್ಯನ ಕೈಯ ಕತ್ತಿ ಬೀಸಿ ಸವರುವನ ಕಾಸುವೀಸವನೆಲ್ಲ ಮೀಸಲು ಮಾಡಿಟ್ಟು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಕಥೆಯ ಕೇಳುವ ಜನರು

ಹರಿಕಥೆಯ ಕೇಳುವ ಜನರು, ಈ ಪರಿಯ ಪುರಾಣಕ್ಕೆ ಸರಿದು ಕುಳ್ಳಿರುವರು ||ಪ|| ನೆಲ್ಲು ಒಣಗಲಿಲ್ಲ , ಹಲ್ಲು ನೋವು ಘನ್ನ ಕಲ್ಲು ಹೋಹದು(?) ಎನ್ನ ಕೈಯಲೆಂದು ಫುಲ್ಲನಾಭನ ಕಥೆಯ ಪೂರೈಸಿ ಕೇಳದೆ ಕಲ್ಲುಗೋವಿನ ಹಾಲು ಕರುವು ಬಯಸುವಂತೆ || ಪರರ ನಿಂದೆಗಳ ಬಿಡದೆ ತಾವಾಡುತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಾಲಿಯ ಮರದಂತೆ ಧರೆಯೊಳು ದುರ್ಜನರು

ಜಾಲಿಯ ಮರದಂತೆ ಧರೆಯೊಳು ದುರ್ಜನರು ಜಾಲಿಯ ಮರದಂತೆ ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂಥ || ಬಿಸಿಲಲಿ ಬಂದವರಿಗೆ ನೆರಳಿಲ್ಲ ಹಸಿದು ಬಂದವರಿಗೆ ಹಣ್ಣೂ ಇಲ್ಲ ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ ರಸದಲ್ಲಿ ಸ್ವದವೂ ವಿಷದಂತೆ ಇರುತಿಹ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭಯನಿವಾರಣವು ಶ್ರೀಹರಿಯ ನಾಮ (ಉದಯರಾಗ)

ಭಯನಿವಾರಣವು ಶ್ರೀಹರಿಯ ನಾಮ ಜಯಪಾಂಡುರಂಗ ವಿಟ್ಠಲ ನಿಮ್ಮ ನಾಮ ಧಾರಿಣೀ ದೇವಿಗಾಧಾರವಾಗಿಹ ನಾಮ ನಾರದರು ನಲಿನಲಿದು ನೆನೆವ ನಾಮ || ಘೋರ ಪಾತಕಿ ಅಜಾಮಿಳನ ಸಲಹಿದ ನಾಮ ತಾರಕವು ಬ್ರಹ್ಮಭವರಿಗೆ ನಿಮ್ಮ ನಾಮ ಮೊರೆಯ ಲಾಲಿಸಿ ಮುನ್ನ ಗಜನ ಸಲುಹಿದ ನಾಮ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ

ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ ||ಪ|| ತೊಲಗಿರೆ ತೊಲಗಿರೆ ಪರಬ್ರಹ್ಮ ಬಲು ಸರಪಳಿ ಕಡುಕೊಂಡು ಬಂತಮ್ಮ ||ಅ ಪ || ಕಪಟನಾಟಕದ ಮರಿಯಾನೆ | ನಿಕಟ ಸಭೆಯಲಿ ನಿಂತಾನೆ ಶಕಟನ ಭಂಡಿಯ ಮುರಿದಾನೆ || ಕಪಟನಾಟಕದಿಂದ ಸೋದರ ಮಾವನ | ನಕಟಕಟೆನ್ನದೆ ಕೊಂದಾನೆ ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂದು ಗೋಕುಲದಲ್ಲಿ ಗೋಪಾಲಕರಾಗಿ

ಅಂದು ಗೋಕುಲದಲ್ಲಿ ಗೋಪಾಲಕರಾಗಿ ಅನಿಮಿಷರೆಲ್ಲ ಸಾಲೋಕ್ಯವ ಪಡೆದರು ಅಂದು ಗೋವುಗಳಾಗಿ ಸಾಧನವ ಮಾಡಿ ಸಾಮೀಪ್ಯವನ್ನು ಪಡೆದರು ಕೆಲರು ಅಂದು ನಿನ್ನನು ಕೂಡಿ ಆಡಿ ಸಾರೂಪ್ಯವೆಂಬ ಮುಕ್ತಿಯ ಪಡೆದರು ತತ್ವಾಭಿಮಾನಿಗಳು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕ್ರಿಮಿಕೀಟನಾಗಿ ಹುಟ್ಟಿದಂದು ಹರಿಶರಣೆಂತೆನಲುಂಟೆ

ಕ್ರಿಮಿಕೀಟನಾಗಿ ಹುಟ್ಟಿದಂದು ಹರಿಶರಣೆಂತೆನಲುಂಟೆ ಹರಿಹರಿಣನಾಗಿ ಹುಟ್ಟಿದಂದು ಹರಿಶರಣೆಂತೆನಲುಂಟೆ ಕತ್ತೆ ಕರಡಿಯಾಗಿ ಹುಟ್ಟಿದಂದು ಹರಿಶರಣೆಂತೆನಲುಂಟೆ ಹಂದಿಶುನಕನಾಗಿ ಹುಟ್ಟಿದಂದು ಹರಿಶರಣೆಂತೆನಲುಂಟೆ ಮರೆತೀಯೆ ಮಾನವ ನಿನ್ನ ಹಿಂದಿನ ಭವಗಳನೊಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಲ್ಲಿ ವನಗಳುಂಟು ಅಪ್ರಾಕೃತವಾದ

ಅಲ್ಲಿ ವನಗಳುಂಟು ಅಪ್ರಾಕೃತವಾದ ಫಲಪುಷ್ಪಗಳಿಂದೊಪ್ಪುತ್ತಲಿಹುದು ಪಕ್ಷಿಜಾತಿಗಳುಂಟು ಅತಿವಿಲಕ್ಷಣವಾದ ಕಿಲಕಿಲ ಶಬ್ದವು ರಂಜಿಸುವ ನುಡಿಗಳು ಮುಕುತರು ಬಂದು ಜಲಕ್ರೀಡೆಗಳ ಮಾಡಿ ಕುಳಿತು ಸುಖಿಪರು ಇಂಥಾ ಸುಖ ಬೇಕಾದರೆ ನೀಚವೃತ್ತಿಯ ಬಿಟ್ಟು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಲ್ಲೆಂಥಾ ಸುಖಗಳುಂಟೊ ಅಲ್ಲಂಥಾ ಸುಖಗಳುಂಟು

ಇಲ್ಲೆಂಥಾ ಸುಖಗಳುಂಟೊ ಅಲ್ಲಂಥಾ ಸುಖಗಳುಂಟು ದುಃಖಮಿಶ್ರವಾದ ಸುಖ ಇಹಲೋಕದಲ್ಲಿಪ್ಪುದು ನಾಶವುಂಟು ದಿನಕೊಂದು ಬಗೆಬಗೆಯಾದಂಥ ಸುಖವಾಗಿ ನಾಶವಿಲ್ಲದ ಪ್ರಾಕೃತವಾದ ಸುಖವನನುಭವಿಸುತ್ತ ಕ್ರಮದಿ ತಿರುಗುವರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬೆಟ್ಟದಂಥ ದುರಿತವು

ಬೆಟ್ಟದಂಥ ದುರಿತವು ಸುತ್ತಮುತ್ತಲೊಟ್ಟರೆ ಕೃಷ್ಣನಾಮದ ಕಿಡಿ ಬಿದ್ದು ಬೆಂದುಹೋದದ್ದು ಕಂಡೆ ಎಲೆ ಎಲೆ ದುರಿತವೆ ತಿರುಗಿ ನೋಡದೆ ಹೋಗು ಎಲೆ ಎಲೆ ದುರಿತವೆ ಮರಳಿ ನೋಡದೆ ಹೋಗು ನಿನ್ನ ಕಂಡರೆ ಶಿಕ್ಷಿಸದೆ ಬಿಡ ಇನ್ನೊಮ್ಮೆ ಕಂಡರೆ ಶಿರವ ಚೆಂಡಾಡುವನು
ದಾಸ ಸಾಹಿತ್ಯ ಪ್ರಕಾರ
ಬರೆದವರು