ಇತರೆ

ಪಟ್ಟಿಯಲ್ಲಿಲ್ಲದ ಬೇರೆ ದಾಸರ ರಚನೆಗಳಿಗೆ ಈ ಟ್ಯಾಗ್ ಹಾಕಬಹುದು

ಗುರು ಮಧ್ವಮುನಿರನ್ನ ಮೂರುಪರಿಯದೋರಿದೆ ನಿನ್ನ

(ಖಮಾಜರಾಗ ಆದಿತಾಳ) ಗುರು ಮಧ್ವಮುನಿರನ್ನ ಮೂರುಪರಿಯದೋರಿದೆ ನಿನ್ನ ಹರಿಭಕ್ತಿಯಲಿ ಅವಿಚ್ಛಿನ್ನ ಸರಿಯಾರು ಧರೆಯೊಳು ನಿನ್ನ ಸ್ಮರಣೆಯಲಿ ರಾಮನ ಪರಮಪಾಪನ್ನ ||೧|| ಅತಿಬಾಹು ಪರಾಕ್ರಮ ಕ್ಷಿತಿಯೊಳು ನಿನ್ನದೇ ನೇಮ ಪ್ರಥಮಲ್ಯಾದೆ ಹನುಮ ದ್ವಿತೀಯಲ್ಯಾದೆ ಭೀಮ ತೃತೀಯದಲಿ ಪೂರ್ಣಪ್ರಜ್ಞನೆನಿಸಿದೆ ನಿಸ್ಸೀಮ ||೨|| ಸಾಹ್ಯಕ್ಕೆ ಕಾರಣ ಮಹಾದೈತ್ಯರ ಮರ್ದನ ಶ್ರೀಹರಿ ಸಾನ್ನಿಧ್ಯ ಪೂರ್ಣ ಇಹ ಸಕಲನಿಪುಣ ಮಹಿಪತಿ ಮುಖ್ಯಪ್ರಾಣ ಸ್ವಹಿತಸಾಧನ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪರಮ ಸಂಜೀವನವು ಗುರು ನಿಮ್ಮ ನಾಮ

( ತಿಲಕಕಾಂಬೋದ ರಾಗ ಝಂಪೆತಾಳ) ಪರಮ ಸಂಜೀವನವು ಗುರು ನಿಮ್ಮ ನಾಮ ಸುರಮುನಿಯು ಸೇವಿಸುವ ದಿವ್ಯನಾಮ ||ಪ|| ಕರಿಯ ಮೊರೆಯನು ಕೇಳಿ ದುರಿತ ಹರಿಸಿದ ನಾಮ ಮೊರೆಯ ಹೊಕ್ಕವರ ಸ್ಥಿರ ಹೊರೆವ ನಾಮ ತರಳ ಪ್ರಹ್ಲಾದನವಸರಕೆ ಒಲಿದಿಹ ನಾಮ ಸ್ಮರಿಸುವರ ವಜ್ರಪಂಜರ ನಿಮ್ಮ ನಾಮ||೧|| ಧರೆಯೊಳಗೆ ದ್ರೌಪದಿಯ ಸ್ಮರಣೆಗೊದಗಿದ ನಾಮ ಕರುಣದಿಂದಭಿಮಾನಗಾಯ್ದ ನಾಮ ದಾರಿದ್ರ್ಯವನು ಸುಧಾಮನಿಗ್ಹಿಂಗಿಸಿದ ನಾಮ ಸಿರಿಸಂಪತ್ತಿಯು ಆಯಿತೀ ನಾಮ ||೨|| ಹರುಷಕರವಿತ್ತು ಉಪಮನ್ಯುಗೊಲಿದ ನಾಮ ಕ್ಷೀರಸಾಗರದಲಿಪ್ಪ ನಾಮ ಶರಣುಹೊಕ್ಕವರ ಪರಿಪರಿ ಕಾಯ್ದ ನಾಮ ಧೀರಧ್ರುವಗಚಲಪದವಿತ್ತ ನಾಮ ||೩|| ಕರೆದು ನಾರಗನೆಂದವನ ತಾರಿಸಿದ ನಾಮ ಪರಮಪಾತಕ ಪರಿಹರಿಸಿದ ನಾಮ ವರಮುನಿಜನರ ತೃಪ್ತಿಗೈಸುವ ನಾಮ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭಾಸ್ಕರಗುರುವರ ಮಗುಟ ವಿಶ್ವದೊಳೊಬ್ಬರೆ ಪ್ರಗಟ

(ರಾಗ-ಹಂಸಧ್ವನಿ ತಾಳ-ದಾದರಾ) ಭಾಸ್ಕರಗುರುವರ ಮಗುಟ ವಿಶ್ವದೊಳೊಬ್ಬರೆ ಪ್ರಗಟ ಭಾಸ್ಕರಗುರುದಯನೋಟ ರಸಕಾಯ ಸವಿದುಂಬೂಟ ||ಪ|| ಭಾಸ್ಕರಗುರು ನಿಜದೆಯ ಲೇಸುದೋರುವ ವಿಜಯ ಭಾಸ್ಕರಗುರು ಅಭಯ ಹಸನಾದ ಪುಣ್ಯೋದಯ ||೧|| ಭಾಸ್ಕರ ಕರುಣಾಕಟಾಕ್ಷ ಭಾಸುದು ಘನ ಪ್ರತ್ಯಕ್ಷ ಭಾಸ್ಕರಗುರು ನಿಜಭಿಕ್ಷ ಹಸನಾಗಿ ಮಾಡುವಾ ಸಂರಕ್ಷ ||೨|| ಭಾಸ್ಕರಗುರು ನಿಜಬೋಧ ಭಾಸುವ ಘನಸರ್ವದಾ ಭಾಸ್ಕರಗುರು ಪ್ರಸಾದ ಸ್ವಸುಖದೋರುವ ಸಂವಿಸ್ವಾದ ||೩|| ಭಾಸ್ಕರಗುರು ಉಪದೇಶ ಭಾಸುವ ಬಲು ಸಂತೋಷ ಭಾಸ್ಕರಗುರುವರೇಶ ಈಶನಹುದೊ ಸರ್ವೇಶ ||೪|| ಭಾಸ್ಕರಗುರುಕೃಪೆ ಜ್ಞಾನ ಲೇಸಾಗಿ ತೋರುವದುನ್ಮನ ಭಾಸ್ಕರಗುರು ದಯಕರುಣ ದಾಸಮಹಿಪತಿಗಾಭರಣ ||೫|| --- ಮಹೀಪತಿದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕರುಣಿಸೊ ಗುರುವೆ ಚರಣಸ್ಮರಣೆಯ ನಿಮ್ಮ

(ರಾಗ ಭೈರವಿ ಕೇರವಾ ತಾಳ) ಕರುಣಿಸೊ ಗುರುವೆ ಚರಣಸ್ಮರಣೆಯ ನಿಮ್ಮ ||ಪ|| ಸ್ಮರಿಸಲಿಕ್ಕೆ ನಾ ನಿಮ್ಮ ತರಳ ಪ್ರಹ್ಲಾದನಲ್ಲ ಅರಿತು ಮಾಡುವುದು ದಯ ತರಣೋಪಾಯದ ||೧|| ಒಲಿಸಿಕೊಳ್ಳಲು ನಿಮ್ಮ ಫಲ್ಗುಣನಂಥವನಲ್ಲ ಗೆಲಿಸುವದೋ ನೀ ಸುಪಥ ನೆಲೆ ನಿಭದೋರಿ ||೨|| ಮೊರೆ ಇಡಲು ನಾ ನಿಮ್ಮ ಕರಿರಾಜನಂಥವನಲ್ಲ ಕರುಣಿಸುವುದೊ ಎನಗೆ ಅರವಿಡಿದು ಪೂರ್ಣ ||೩|| ಶರಣು ಹೋಗಲು ನಿಮ್ಮ ಧೀರ ವಿಭೀಷಣನಲ್ಲ ಪಾರ ಗೆಲಿಸುವದೊ ನಿಮ್ಮ ವರಕೃಪೆಯಿಂದ ||೪|| ಭಕ್ತಿಮಾಡಲು ನಿಮ್ಮ ಶಕ್ತ ಸಮರ್ಥನಲ್ಲ ಯುಕ್ತಿದೋರುವದೊ ನಿಮ್ಮ ಮುಕ್ತಿ ಮಾರ್ಗದ ||೫|| ಸ್ತುತಿಯ ಮಾಡಲು ನಿಮ್ಮ ಅತಿಶಯ ಭಕ್ತ ನಾನಲ್ಲ ಗತಿಸುಖದೋರೆನಗೆ ಪತಿತಪಾವನ ||೬|| ದಾಸರ ದಾಸನೆಂದು ಲೇಸಾಗಿ ಮಹಿಪತಿಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗುಣಾತೀತ ಸದ್ಗುರು ಗಣನಾಥ

( ರಾಗ ಜೋಗಿಯಾ ತಾಳ ದೀಪಚಂದಿ) ಗುಣಾತೀತ ಸದ್ಗುರು ಗಣನಾಥ ಘನಸುಖದಾಯಕ ಸದೋದಿತ ||ಪ|| ಅನುದಿನ ಮಾಡುವೆ ಮನೋಹರ ಅಣುರೇಣುದೊಳು ನೀ ಸಾಕ್ಷಾತ್ಕಾರ ಮುನಿಜನರಿಗಾಗುವಿ ಸಹಕಾರ ನೀನಹುದೋ ಭಕ್ತರ ವಿಘ್ನಹರ ||೧|| ನಿಮ್ಮ ಬೋಧಗುಣವೆ ಸರಸ್ವತಿ ಸಮ್ಯಗ್ ಜ್ಞಾನ ಬೀರುವ ನಿಜಸ್ಥಿತಿ ಬ್ರಹ್ಮಾದಿಗಳೊಂದಿತ ನಿಜಖ್ಯಾತಿ ಬ್ರಹ್ಮಾನಂದದೋರುವ ಫಲಶ್ರುತಿ ||೨|| ಬೇಡಿಕೊಂಬೆ ನಿಮಗೆ ಅನುದಿನ ಕೊಡುವವರೆಗೆ ನೀನೆನಗೆ ನಿಧಾನ ಮೂಢ ಮಹಿಪತಿ ಒಡೆಯ ನೀ ಪೂರ್ಣ ಮಾಡುತಿಹೆ ನಿತ್ಯವು ನಾ ನಮನ ||೩|| ------- ಮಹೀಪತಿದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ವೇಂಕಟಾಚಲನಿವಾಸ ಸಲಹಯ್ಯ

(ಮಧ್ಯಮಾವತಿ ರಾಗ ಝಂಪೆತಾಳ) ವೇಂಕಟಾಚಲನಿವಾಸ ಸಲಹಯ್ಯ ಪಂಕಜಾಕ್ಷನೆ ಶ್ರೀನಿವಾಸ ||ಪ|| ವಾರಿಯೊಳು ಮುಳುಗಾಡಿದೆ, ಮಂದರದ ಮೇರು ಬೆನ್ನೊಳು ತಾಳಿದೆ ಕಾರಡವಿಯೊಳು ಚರಿಸಿದೆ, ಕಂಬದೊಳು ಘೋರ ರೂಪವ ತೋರಿದೆ||೧|| ವಟುವಾಗಿ ಧರೆಯನಳೆದೆ, ಕೊಡಲಿಯೊಳು ಪಟುತರದ ನೃಪರ ಗೆಲಿದೆ ಅಟವಿವಾಸವ ಮಾಡಿದೆ, ರಣದೊಳಗೆ ಚಟುಳ ವಾಜಿಯ ನಡೆಸಿದೆ ||೨|| ಅಂಗದಂಬರವ ಮರೆದೆ, ಕಡೆಯೊಳು, ತು- ರಂಗದೊಳು ಏರಿ ನಲಿದೆ ಬಂಗಾರದದ್ರಿಯೊಳು ಮೆರೆದೆ , ವರಾಹ ರಂಗತಿಮ್ಮಪ್ಪ ಒಲಿದೆ ||೩|| -- ರಚನೆ :- ನೆಕ್ಕರ ಕೃಷ್ಣದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅನುಮಾನವೇತಕೆ ಅನುಗುಣವಾಗಿಯೆ ಪ್ರಣವರೂಪನ

( ಕೇದಾರಗೌಳ ರಾಗ ಅಷ್ಟತಾಳ) ಅನುಮಾನವೇತಕೆ ಅನುಗುಣವಾಗಿಯೆ ಪ್ರಣವರೂಪನ ಹೋಗಿ ನೋಡಿ ಬರುವುದಕೆ ||ಪ|| ಹೋಗುವ ಎಂದೆಂಬ ಮಾತು ನಿಶ್ಚಯವಾಗಿ ಬೇಗದ ಪಯಣದಲಿ ನಾಗಗಿರೀಶನ ಕಂಡು ಕಾಣಿಕೆಯಿತ್ತು ಸಾಗಿ ಬರುವ ಊರಿಗೆ ಇವರಿಗೆ ||ಅ|| ಕೋನೇರಿವಾಸನ ನಾ ಹೋಗಿ ನೋಡಲು ಮಾನವ ಜನುಮದಲಿ ಹೀನ ವೃತ್ತಿಯ ಬಿಟ್ಟು ಜ್ಞಾನಬುತ್ತಿಯ ಕಟ್ಟಿ ಕಾಣಲು ಇಹಪರವಾತ ತಾನೆರೆವ ||೨|| ರಾಮನ ಶಿಕ್ಷೆಯು ರಾಮನ ರಕ್ಷೆಯು ರಾಮನ ನಿಜಮತವು ರಾಮ ಆಂಜನೇಯನ ಗಿರಿಯೊಳು ನಿಂತಿಪ್ಪ ಭೂಮಿ ವರಾಹ ತಿಮ್ಮಪ್ಪ ||೩|| -- ರಚನೆ :-ನೆಕ್ಕರ ಕೃಷ್ಣದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನು ಸುಕೃತದ ಫಲವೊ ಶ್ರೀನಿವಾಸನೆ ಹೇಳು

(ರಾಗ ಭೈರವಿ ಝಂಪೆತಾಳ) ಏನು ಸುಕೃತದ ಫಲವೊ ಶ್ರೀನಿವಾಸನೆ ಹೇಳು ಹಾನಿಯಾಗಿಯೆ ಅವಮಾನ ತೋರುತಿದೆ ||ಪ|| ವಾಸುದೇವನೆ ಎನ್ನ ಈಸುದಿನ ಪರಿಯಂತ ಬೇಸರಿಲ್ಲದೆ ಕಾಯ್ದೆ ಲೇಸ ಕರುಣಿಸಿದೆ ಈಸಾಡಿದೆನು ನಾನು ಈ ಗೃಹದೊಳೀಗೇನು ದಾಸಿನವು ನಿನಗಾಯಿತು ಮೋಸ ಯೋಚಿಪರೆ ||೧|| ಹಗಲುಗತ್ತಲೆಯಾಗಿ ಮೊಗವು ಕಾಣದೆ ಎನಗೆ ಜಗದುದರ ನಿನ್ನಾಣೆ ನಗೆಯಾಯ್ತು ಜಗಕೆ ಹಗೆಯ ಮಧ್ಯದಿ ಸಿಲುಕಿ ಮೃಗವು ಬಾಯ್ಬಿಟ್ಟಂತೆ ಮಿಗ ಕ್ಲೇಶಬಟ್ಟು ನರಮೃಗವು ತಾನಾದೆ ||೨|| ಆರು ಹಿತವರು ಇಲ್ಲ ಧಾರುಣಿಯ ಬಲವಿಲ್ಲ ಪಾರಾಗಿ ನಾಚಿಕೆಯು ಬೇರೂರಿತು ಘೋರ ಆಡವಿಯ ಒಳಗೆ ಗಾರುಗತ್ತಲೆ ಸುತ್ತಿ ಮಾರಿದೆಯ ಚೋರರಿಗೆ ದಾರಿಗಾಣಿಸದೆ ||೩|| ದೊರೆಯು ಮನ್ನಿಸಿ ಕೊಡಲು ನೆರೆಹೊರೆಯ ಕರಕರೆಯು ಹರದಿಯೊಳು ನಂಬಿಗೆಯು ಕಿರಿದಾಯಿತು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಣದಿದ್ದರೆ ನಮ್ಮ ಪ್ರಾಣ ಉಳಿಯದು

(ಭೈರವಿ ರಾಗ ತ್ರಿವಿಡೆ ತಾಳ) ಕಾಣದಿದ್ದರೆ ನಮ್ಮ ಪ್ರಾಣ ಉಳಿಯದು ಜಾಣರಾಯಗೆ ಇಟ್ಟ ಕಾಣಿಕೆಯನು ಕೊಟ್ಟು ||ಪ|| ಕಷ್ಟಗಳೆಲ್ಲವು ಬೆನ್ನಟ್ಟಿ ಬರುವಾಗ ಕಟ್ಟಿದ ಹರಕೆಗಳೆಲ್ಲವನು ಸಿಟ್ಟುಮಾಡುವ ಸ್ವಾಮಿ ಇಟ್ಟುಕೊಂಡರೆ ಇನ್ನು ಮುಟ್ಟಿಸಿಕೊಡಬೇಕಲ್ಲಿ ತಿಮ್ಮಪ್ಪನಲ್ಲಿ ||೧|| ಗಂಡಹೆಂಡತಿಯು ಮಕ್ಕಳು ಸಹವಾಗಿ ದಂಡು ಮಾಳ್ಪೆವು ತಾವು ಎನುತಲಿ ಉಂಡೆವು ಸ್ಥಿರವಾರ ಊಟವ ಏಕವ ಕಂಡು ಬಹರೆ ಹೋಗುವ ದಯವಾಗುವ ||೨|| ಕಟ್ಟಿದ ಕಾಣಿಕೆ ಇಟ್ಟು ಚರಣದಲ್ಲಿ ಸಾಷ್ಟಾಂಗವು ಎರಗಿದರೆ ದೃಷ್ಟಿಯಿಂದಲೆ ನೋಡಿ ದಯಮಾಡಿ ಕಳುಹುವ ಬೆಟ್ಟದ ವರಾಹ ನಮ್ಮಪ್ಪ ತಿಮ್ಮಪ್ಪನು ||೩|| -- ರಚನೆ -ನೆಕ್ಕರ ಕೃಷ್ಣದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮರುಳತನವು ಬಂದು ಎನ್ನ ಕೊರಳ ಕೊಯ್ವುದು

(ರಾಗ ಸೌರಾಷ್ಟ್ರ ಆದಿತಾಳ) ಮರುಳತನವು ಬಂದು ಎನ್ನ ಕೊರಳ ಕೊಯ್ವುದು ದುರುಳನಾಗಿ ಇರುಳುಹಗಲು ಒರಲುತಿಪ್ಪುದು ||ಪ|| ಮಾರಿಯನ್ನು ಮನೆಗೆ ತಂದು ತೋರಿಯಿಡುವುದು ಚೋರರನ್ನು ತಂದು ತನಗೆ ಸೇರಿ ಕೊಡುವುದು ದೂರುಬಪ್ಪ ದಾರಿಯನ್ನು ಸೇರಿ ನಡೆವುದು ಸಾರಿ ಪರನಾರಿಯನು ಸೂರೆಗೊಂಬುದು ||೧|| ಹೆಂಡತಿಯ ಸುಲಿದು ತನ್ನ ಮಿಂಡಿಗಿಡುವುದು ಕಂಡುಕಂಡು ಹರುಷ ತಾಳಿಕೊಂಡು ಇರುವುದು ಭಂಡತನದಿ ಕೊಂದು ದೂರಕೊಂಡು ಪೋಪುದು ಉಂಡು ಉಡುವ ಹರುಷ ಸರಿಯ ಮಿಂಡಿಗಪ್ಪುದು ||೨|| ಸೂಳೆಯನ್ನು ಕಂಡು ಹರುಷತಾಳಿ ಇರುವುದು ವೇಳೆಗವಳು ಬಾರದಿರಲು ಚೀರಿ ಅಳುವುದು ಹಾಳು ಬದುಕಿನೊಳಗೆ ಬಹಳ ಚಾಳು ತೋರ್ಪುದು ಖೂಳರನ್ನು ಕರೆದು ಅನ್ನಪಾಲನೆರೆವುದು ||೩|| ಇಲಿಯು ಹೆಚ್ಚಿತೆಂದು ಮನೆಗೆ ಉರಿಯನಿಡುವುದು
ದಾಸ ಸಾಹಿತ್ಯ ಪ್ರಕಾರ
ಬರೆದವರು