ಇತರೆ

ಪಟ್ಟಿಯಲ್ಲಿಲ್ಲದ ಬೇರೆ ದಾಸರ ರಚನೆಗಳಿಗೆ ಈ ಟ್ಯಾಗ್ ಹಾಕಬಹುದು

ದೇವಾಧಿದೇವ ನೀನಹುದೋ ಶ್ರೀಹರಿ

(ರಾಗ ಭೀಮಪಲಾಸ್ ತ್ರಿತಾಳ) ದೇವಾಧಿದೇವ ನೀನಹುದೋ ಶ್ರೀಹರಿ ಕಾವ ಕರುಣಿ ನೀನೆವೆ ಮುರಾರಿ ||ಪ|| ಕಮಲಭವಾರ್ಚಿತ ಕಾರುಣ್ಯಶೀಲ ವಿಮಲ ವಿರಾಜಿತ ಮದನ ಗೋಪಾಲ ||೧|| ಕನಕಾಂಬರಧರ ಕಸ್ತೂರಿತಿಲಕ ಸನಕಾದಿವಂದ್ಯ ಶರಣರಕ್ಷಕ ||೨|| ಅಮಿತಪರಾಕ್ರಮ ಅಗಣಿತ ಮಹಿಮ ಅಮರಜನೇತ್ರ ನೀನಹುದೊ ನಿಸ್ಸೀಮ ||೩|| ಮುನಿಜನ ಪಾಲಕ ಮಾಮನೋಹರ ಘನಸುಖದಾಯಕ ಸುಜನ ಸಹಕಾರ ||೪|| ಭಾನುಕೋಟಿತೇಜ ನೀನೇ ಸುಹೃದಯ ದೀನದಯಾಳು ನೀನಹುದೋ ಮಹಿಪತಿಯ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀ ರಾಮಾ ರಾಮಾ

(ದುರ್ಗಾ ರಾಗ ತಾಳ ತ್ರಿತಾಳ) ಶ್ರೀ ರಾಮಾ ರಾಮಾ ||ಪ|| ಜಯ ಜಯಾತ್ಮರಾಮಾ ದಯಗುಣದಿ ನಿಸ್ಸೀಮಾ ಮಾಯಾರಹಿತನುಪಮಾ- ಕಾಯಾ ಕೃಪಾನಿಧಿ ನಮ್ಮಾ ||೧|| ಮುನಿಜನರಾ ಪ್ರತಿಪಾಲಾ ದೀನಬಂಧು ದೀನದಯಾಳಾ ಘನಸುಖದ ಕಲ್ಲೋಳಾ ನೀನಹುದೈ ಅಚಲಾ ||೨|| ಕರುಣಾಬ್ಧಿ ನೀನೇ ರಾಮಾ ಹರಹೃದಯ ವಿಶ್ರಾಮಾ ತರಮಹೀಪತಿ ನಿಮ್ಮ ಸ್ಮರಿಸುವ ಪಾದಪದ್ಮ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಯ ಜಯ ಸರಸ್ವತಿ ಜಯವರ ಪೂರಣಮತಿ

(ಬಾಗೇಶ್ರೀ ರಾಗ , ಝಂಪೆತಾಳ ) ಜಯ ಜಯ ಸರಸ್ವತಿ ಜಯವರ ಪೂರಣಮತಿ ತ್ರಯಲೋಕ್ಯದಲಿ ಖ್ಯಾತಿ ಜಯ ಸುಕೀರ್ತಿ ||ಪ|| ವಿದ್ಯಾವರದಾಯಿನೀ ಸಿದ್ಧಿಗೆ ಶಿಖಾಮಣೀ ಬುದ್ಧಿಪ್ರಕಾಶಿನೀ ಸದ್ಭೂಷಿಣೀ ||೧|| ಕರಕಮಲದಲಿ ವೀಣೀ ಸುರಸ ಅಮೃತವಾಣೀ ವರವಿದ್ಯದಲಿ ದಾನೀ ಸುಪ್ರವೀಣೀ ||೨|| ಪ್ರಸನ್ನ ವದನೀ ವಿಶ್ವದಲಿ ನೀ ಪೂರ್ಣೀ ಹಂಸವಾಹಿನೀ ಪೂರ್ಣಿ ಸ್ವಸಿದ್ಧಿಣೀ ||೩|| ಸದಾಸದ್ಗುರು ಸ್ತುತಿ ಒದಗುಹಾಂಗ ಸ್ಫೂರ್ತಿ ಇದೇ ಮಹಿಪತಿ ಕುರ್ತಿ ( ಕೃತಿ?) ಬೋಧಿಸು ಮತಿ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುಂಜಾನೆ ಎದ್ದು ಮುರಹರನ ಸ್ಮರಿಸೆಲಾ ಮನವೇ (ಚತುರ್ವಿಂಶತಿ ನಾಮಾವಳಿ )

( ವಸಂತ ರಾಗ ಝಂಪೆತಾಳ) ಮುಂಜಾನೆ ಎದ್ದು ಮುರಹರನ ಸ್ಮರಿಸೆಲಾ ಮನವೇ ಅಂಜು ಭವಭಯದುರಿತ ಹಿಂಗಿಸುವನು ||ಪ|| ಕೇಶವೆಂದೆನಲು ತಾ ಕ್ಲೇಶ ಪರಿಹರಿಸುವನು ನಾಶಗೈಸುವ ಭವ ನಾರಾಯಣೆನಲು | ಮೀಸಲು ಮನದಲೊಮ್ಮೆ ಮಾಧವೆಂದೆನಲು ತಾ ಭಾ- ವಿಸುವ ಹೃದಯದೊಳು ಗೋವಿಂದನು | ವಾಸನಿಯ ಪೂರಿಸುವ ವಿಷ್ಣುಯೆಂದೆನಲು ತಾ ದೋಷ ಛೇದಿಸುವ ಮಧುಸೂದನನೆನಲು | ಭಾಷೆ ಪಾಲಿಸುವ ತ್ರಿವಿಕ್ರಮೆಂದೆನಲು ತಾ ಲೇಸು ಗೈಸುವ ಜನುಮ ವಾಮನನೆನಲು ||೧|| ಸಿರಿ ಸಕಲ ಪದವೀವ ಶ್ರೀಧರನೆಂದೆನಲು ತಾ ಹರುಷ ಗತಿಯೀವ ಹೃಷಿಕೇಶನೆನಲು | ಪರಮಪಾತಕದೂರ ಪದ್ಮನಾಭೆಂದೆನಲು ದಾರಿದ್ರ್ಯಭಂಜನ ದಾಮೋದರೆನಲು | ಸುರಿಸುವ ಅಮೃತ ಸಂಕರುಷಣೆಂದೆನಲು ಹೊರೆವ ಧರೆಯೊಳು ವಾಸುದೇವನೆನಲು | ಪರಿಪರಿಯ ಸಲಹುವ ಪ್ರದ್ಯುಮ್ನನೆಂದೆನಲು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಮ್ಮಾ ಬಾ ನಮ್ಮಮ್ಮನೇ

(ಮಾಂಡ್ ರಾಗ ಕೇರವಾ ತಾಳ ) ಅಮ್ಮಾ ಬಾ ನಮ್ಮಮ್ಮನೆ ಅಮ್ಮ ನೀಡಮ್ಮನೆ ಬೊಮ್ಮನಾ ಪಡೆದ ಶ್ರೀಹರಿ ಪರಬ್ರಹ್ಮನೆ ||ಪ|| ಬೇಡುವೆ ನಿಮ್ಮನೆ ಕಾಡುವೆ ಸುಮ್ಮನೆ ಓಡ್ಯಾಡಿ ಬಂದು ಅಂಡಲಿವೆ ನಾ ತಮ್ಮನೆ ||೧|| ಬಯಸಿ ಬಂದೊಡೆ ನಾ ಕಾಯಬೇಕೆನ್ನನ ತಾಯಿ ತಂದ್ಯೊಬಳೆ ನೀನೇ ಸನಾತನ ||೨|| ಉಣಿಸು ನಾಮಾಮೃತ ದಣಿಸು ಮನೋರಥ ದೀನ ಮಹಿಪತಿ ಜೀವ ಪ್ರಾಣಕ ಸನಾಥ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶರಣು ಶರಣು ಶರಣು ದೇವಾದಿಗಳೊಂದಿತನಹುದೋ ಸ್ವಾಮಿ ಗಣನಾಥ

(ಸಾರಂಗ ರಾಗ , ಕೇರವಾ ತಾಳ) ಶರಣು ಶರಣು ಶರಣು ದೇವಾದಿಗಳೊಂದಿತನಹುದೋ ಸ್ವಾಮಿ ಗಣನಾಥಾ ||ಪ|| ಅಖಿಳಭುವನದೊಳು ಪೂಜಿತಾ ಭಕುತಜನಕೆ ನೀ ಸಾಕ್ಷಾತಾ ಸಕಲವಿದ್ಯಾವರದಾತಾ ಶಕುತನಹುದಯ್ಯಾ ಪ್ರಖ್ಯಾತ ||೧|| ಶುದ್ಧಬುದ್ಧರ ಸಹಕಾರಾ ಬುದ್ಧ ಈವ ಘನ ಉದಾರಾ ರಿದ್ಧಿ ಸಿದ್ಧಿಗಾಗಿಹೆ ನೀ ಆಧಾರಾ ಸಿದ್ಧಿದಾಯಕ ವಿಘ್ನಹರಾ ||೨|| ಜನಕೆ ಮಾಡುವ ದೋಷನಾಶಾ ಅನುದಿನವು ಮತಿಪ್ರಕಾಶಾ ದೀನ ಮಹೀಪತಿಯಾ ಮನೋಭಾವಪೂರಿತಾ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿಮ್ಮಿಂದ ಗುರು ಪರಮಕಲ್ಯಾಣವು

(ರಾಗ - ಬಹುಳಿ (ಶಂಕರಾ) ಝಪ್ ತಾಳ) ನಿಮ್ಮಿಂದ ಗುರು ಪರಮಕಲ್ಯಾಣವು ನಿಮ್ಮಿಂದಲೆನಗೆ ಘನ ಪರಿಪೂರ್ಣವು||ಪ|| ಹುರಿದು ಭವಬೀಜ ಧರೆಯೊಳು ದಯ ಕರುಣದಲಿ ಪರಮ ಆನಂದ ಸುಖ ಮಳೆಯಗರೆದು ಕರ್ಮಪಾಶಗಳೆಂಬ ಕರಿಕಿಬೇರನು ಕಿತ್ತಿ ಹರಗಿ ಬಿತ್ತಲು ನಾಮ ತಾರಕುಪದೇಶದಲಿ ||೧|| ವರ ಪ್ರತಾಪದ ಬೆಳೆಯು ತುಂಬಿ ತುಳುಕುವ ಸಿರಿಯು ಸರ್ವಮಯವೆಂಬ ತೆನೆಗಳು ತುಂಬಿ ಏರಿ ಸುಷುಮ್ನ ನಾಳದ ಮಂಚಿಕೆಯ ಮೆಟ್ಟಿ ಪರಿಪರಿ ಅವಸ್ಥೆ ಹಕ್ಕಿಗಳ ಹಾರಿಸಲಾಗಿ ||೨|| ಮುರಿದು ಭೇದಾಬೇದವೆಂಬ ಗೂಡಲೊಟ್ಟಿ ಅರಿವು ಕಣದಲ್ಲಿ ತರತರದಲಿಕ್ಕಿ ಜ್ಞಾನವೈರಾಗ್ಯವೆಂಬೆರಡು ಎತ್ತುಗಳ ಹೂಡಿ ಸರ್ವಗುಣ ತೆನೆ ತೆಗೆದು ತುಳಿದು ರಾಶಿ ಮಾಡಿಸಲಾಗಿ ||೩|| ಸರ್ವಮಯವೆಂಬ ರಾಶಿಯು ಒಬ್ಬುಳಿಯ ಮಾಡಿ ತೂರಿ ತರ್ಕ ಭಾಸಗಳೆದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೊಟ್ಟು ಕೊಂಡಾಡಬೇಕು ಘಟ್ಟಿಗೊಂಡು ಗುರುಭಕ್ತಿ

( ಭೀಮಪಲಾಸ ರಾಗ ತೀನ್ ತಾಳ) ಕೊಟ್ಟು ಕೊಂಡಾಡಬೇಕು ಘಟ್ಟಿಗೊಂಡು ಗುರುಭಕ್ತಿ ಗುಟ್ಟಿನೊಳು ಕೊಡಬೇಕು ಇಟ್ಟುದೋರುತದ ಮುಕ್ತಿ ||ಪ|| ಕೊಟ್ಟ ಗುರುವಿಗೆ ಮನ ಕೊಳ್ಳಬೇಕು ನಿಜಘನ ಇಟ್ಟಾದೆ ನಿಜಧನ ಪಡಿಬೇಕು ಸಾಧನ ಕೊಟ್ಟಾಂಗ ಕೊಂಬು ಖೂನ ಹೇಳಿಕೊಡುವನ ಗುರುಜ್ಞಾನ ಮುಟ್ಟಿ ಭಜಿಸುದು ಪೂರ್ಣಸ್ವಾಮಿ ಶ್ರೀನಾಥಾರ್ಪಣ ||೧|| ಕೊಟ್ಟು ಕೊಂಡ ನೋಡಿ ನೇಮ ಸೃಷ್ಟಿಯೊಳು ಸುದಾಮ ಮುಷ್ಟಿ ಅವಲಕ್ಕಿ ಧರ್ಮ ಪಡೆದುಕೊಂಡ ದಿವ್ಯಗ್ರಾಮ ಕೊಟ್ಟು ಶಾಕದಳವಮ್ಮ ದ್ರೌಪದಿ ಆದಳು ಸಂಭ್ರಮ ಕೃಷ್ಣಗಿದೆ ಅತಿಪ್ರೇಮ ಶಿಷ್ಟಜನಕ ಸುಕ್ರಮ ||೨|| ಮುಕ್ತಿಗಿದೆ ಮೇಲು ಭಕ್ತಿ ನೋಡಿ ಸಜ್ಜನರ ಯುಕ್ತಿ ಭೋಕ್ತ ಬಲ್ಲ ಗುರುಮೂರ್ತಿ ಮಾಡಬೇಕು ಭಾವಭಕ್ತಿ ಮುಕ್ತ ಜನರಿಗಿದೆ ಗತಿಕೊಟ್ಟು ಕೊಂಡಾಡುವ ಶಕ್ತಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಂದು ಶ್ರೀಗುರುಪಾದಪದ್ಮ ನೋಡುವ

(ರಾಗ - ವರಾಳಿ ( ಬಹಾರ್ ) ತೀನ್ ತಾಳ) ಇಂದು ಶ್ರೀಗುರುಪಾದಪದ್ಮ ನೋಡುವ ಎಂದೆಂದು ಬಿಡದೆ ಭಕ್ತಿಭಾವ ಮಾಡುವ ||ಪ|| ಮನವೆಂಬ ಮಂಟಪವನಾಡುವ ನೆನವು ನವರತ್ನದ ಸಿಂಹಾಸನಿಡುವ ಜ್ಞಾನಧ್ಯಾನದೆಡಬಲದಿ ಪಿಡಿವ ಅನುವಾಗಿ ಅನಿಮಿಷದಲಿ ನೋಡುವ ||೧|| ತನುವೆಂಬ ತಾರತಮ್ಯಭಾವ ಮಾಡುವ ಅನುಭವದಿಂದನುಪಮನ ನೋಡುವ ಆನಂದವೆಂಬ ಅಭಿಷೇಕವ ಮಾಡುವ ಮನೋ ಅಭೀಷ್ಟೆಯ ಸುವಸ್ತ್ರ ನೀಡುವ ||೨|| ಬುದ್ಧಿಭಾವನೆಯ ಗಂಧಾಕ್ಷತೆ ಇಡುವ ಶುದ್ಧ ಸುವಾಸನೆ ಪರಿಮಳ ಮಾಡುವ ಶಬ್ದ ಸುವಾಕ್ಯದ ಪುಷ್ಪವ ನೀಡುವ ಸಿದ್ಧಾಂತವೆಂಬುವ ಸುಸೇವೆ ಮಾಡುವ ||೩|| ಪ್ರಾಣಪಂಚದಾ ಪಾದಪೂಜೆಯ ಮಾಡುವ ಪುಣ್ಯ ಪೂರ್ವಾರ್ಜಿತ ಫಲಗಳಿಡುವ ಅನೇಕವಾದ ಪರಿಪೂಜೆ ಮಾಡುವ ಧನ್ಯಧನ್ಯವಾಗುವ ಮುಕ್ತಿ ಬೇಡುವ ||೪|| ನಿರ್ವಿಕಲ್ಪ ನಿಜಮೂರುತಿ ನೋಡುವ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪೂಜಿ ಮಾಡುವ ಬನ್ನಿರೊ ಗುರುಪಾದ

( ಭೈರವಿರಾಗ ತೀನ್ ತಾಳ) ಪೂಜಿ ಮಾಡುವ ಬನ್ನಿರೊ ಗುರುಪಾದ ಪೂಜಿ ಮಾಡುವ ಬನ್ನಿರೊ ||ಪ|| ತಿಳುಹು ತಿಳಿಯ ನೀರಿಲೆ ತನುವಿಲೆ ಅಭಿಷೇಕವ ಮಾಡುವ ನಿರ್ಮಳವೆಂಬ ಸುವಸ್ತ್ರದಿಂದಲಿ ದಿವ್ಯ ಪೂಜಿ ಮಾಡುವ ಬನ್ನಿರೊ ||೧|| ಶುದ್ಧ ಸುವಾಸನೆಯ ಗಂಧದಾರತಿ ಅಕ್ಷತಿಯಿಡುವ ಸದ್ಭಾವ ಪರಿಮಳ ಪುಷ್ಪದಿಂದಲಿ ದಿವ್ಯ ಪೂಜಿ ಮಾಡುವ ಬನ್ನಿರೊ ||೨|| ಅರವೆಂಬ ದೀಪದಲಿ ಗುರುಸ್ವರೂಪವ ನೋಡುವ ಬನ್ನಿರೊ ಪರಮಾನಂದ ಹರುಷ ನೋಡುತ ನಿಜ ನಲಿದಾಡುವ ಬನ್ನಿರೊ || ೩|| ಭಕ್ತವತ್ಸಲ ಮೂರ್ತಿಗೆ ಸುಖದುಃಖ ಧೂಪಾರತಿ ಮಾಡುವ ಏಕೋಚಿತ್ತವೆಂಬ ಏಕಾರತಿಯಿಂದ ಪೂಜಿ ಮಾಡುವ ಬನ್ನಿರೊ ||೪|| ನೆನವು ನೈವೇದ್ಯದಲಿ ಮನಬುದ್ಧಿ ತಾಂಬೂಲವ ನೀಡುವ ಪ್ರಾಣ ಮಹಿಪತಿಯ ಪಂಚಾರತಿಯಿಂದ ಪೂಜಿ ಮಾಡುವ ಬನ್ನಿರೊ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು