ಸುಣ್ಣವಿಲ್ಲ ಭಾಗವತರೆ

ಸುಣ್ಣವಿಲ್ಲ ಭಾಗವತರೆ

( ರಾಗ ಪೂರ್ವಿ ಅಟ ತಾಳ) ಸುಣ್ಣವಿಲ್ಲ ಭಾಗವತರೆ ನುಣ್ಣನೆ ಗೋಡೆಯ ನಿನ್ನೆ ತೊಡೆದು ಬಿಟ್ಟೆ ||ಪ || ವೀಳ್ಯ ಹಾಕುವನಲ್ಲ ವ್ಯಾಧಿಸ್ಥ ಗಂಡನು ಬಾಳು ಸಟೆ ಎನ್ನ ಬಾಯಿ ನೋಡಿ ಹಾಳು ಮನೆಯ ಹೊಕ್ಕು ಒಡಲು ಉರಿಯುತಿದೆ ಹೇಳಿ ಈ ಬದುಕನ್ನು ಪ್ರಯೋಜನವೇನು || ಮದ್ದು ತಿಂದು ತಿಂದು ಮನೆಯೆಲ್ಲ ಬರಿದಾಗಿ ಹೊದ್ದಿತು ಮೂದೇವಿ ಮೈದುನಗೆ ಮದ್ದಿಕ್ಕೊ ಸಂಚಿಯು ಭಂಗಿ ಮುಕ್ಕಿ ಭಾವ ಬಿದ್ದುಕೊಳ್ಳುತಾನೆ ಒಳಗೆ ಕದನ ಮುಚ್ಚಿ || ತೊನ್ನುಬಡಕ ಮಾವ ಅನ್ಯಕಾರಿ ಅತ್ತೆ ಘನ್ನ ಘಾತಕಿ ರಂಡೆ ಅತ್ತಿಗೆಯು ಎನ್ನ ಗೋಳು ತಾನೆ ನಾಶವೆಂದಿಗಹುದೊ ಪನ್ನಗಶಯನ ಶ್ರೀ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು