ಸುಂದರಮೂರುತಿ ಮುಖ್ಯಪ್ರಾಣ

ಸುಂದರಮೂರುತಿ ಮುಖ್ಯಪ್ರಾಣ

(ರಾಗ ಜಂಜೋಟಿ ಅಟತಾಳ) ಸುಂದರಮೂರುತಿ ಮುಖ್ಯಪ್ರಾಣ ಬಂದ ಮನೆಗೆ ಪ್ರಾಣ ಬಂದ ಮನೆಗೆ , ಶ್ರೀರಾಮಧ್ವನಿಗೆ || ಕಣಕಾಲಂದುಗೆ ಗೆಜ್ಜೆ ಝಣಝಣರೆನುತ ಜಣಕು ಜಣಕುರೆಂದು ಕುಣಿಕುಣಿದಾಡುತ || ತುಂಬುರು ನಾರದ ವೀಣೆ ಬಾರಿಸುತ ವೀಣೆ ಬಾರಿಸುತ ಶ್ರೀರಾಮನಾಮ ಪಾಡುತ || ಪುರಂದರವಿಠಲನ ನೆನೆದು ಪಾಡುತಲಿ ನೆನೆದು ಪಾಡುತಲಿ ಆಲಿಂಗನ ಮಾಡುತಲಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು