ಸಿಕ್ಕಿದನೆಲೆ ಜಾಣೆ

ಸಿಕ್ಕಿದನೆಲೆ ಜಾಣೆ

( ರಾಗ ಮುಖಾರಿ ಅಟ ತಾಳ) ಸಿಕ್ಕಿದನೆಲೆ ಜಾಣೆ ಶ್ರೀ ವೇಣುಗೋಪಾಲ ಭಕ್ತವತ್ಸಲ ದೇವನು ||ಪ || ಮಕ್ಕಳ ಚಂಡಿಕೆ ಮರದ ಕೊನೆಗೆ ಕಟ್ಟಿ ಘಕ್ಕನ ಚಪ್ಪಾಳೆಯಿಕ್ಕಿ ನಲಿವ ನಮ್ಮ ||ಅ || ಹೆಣ್ಣು ಮಕ್ಕಳು ಬಚ್ಚಲೊಳಗೆಣ್ಣೆ ಹಚ್ಚಿಕೊಂಡು ಬಣ್ಣ ವಸ್ತ್ರವ ಬಿಚ್ಚಿ ಬತ್ತಲಿರೆ ಕಣ್ಣಿಗೆ ಬಿಸಿನೀರು ಚೆಲ್ಲಿ ಸೀರೆಯನೊಯ್ದು ಉನ್ನತವಾದ ವೃಕ್ಷವನೇರಿ ಇಹನಮ್ಮ || ಪಟ್ಟೆ ಮಂಚದ ಮೇಲೆ ಪತಿಯಂತೆ ಕುಳ್ಳಿರೆ ಎಷ್ಟು ಸ್ವತಂತ್ರ ಇವಗೆ ಗೋಪಿ ಉಟ್ಟ ಸೀರೆಯನೊಯ್ದು ಬಟ್ಟಕುಚವ ಪಿಡಿವ- ನೆಷ್ಟೆಂದ ಹೇಳೆ ಭ್ರಷ್ಟ ಮಾಡಿದನಮ್ಮ || ಸಡಗರದಿ ಷೋಡಶ ಸಹಸ್ರ ಸ್ತ್ರೀಯರ ಒಡಗೂಡಿ ಕೊಳಲನೂದುತ ಬಂದು ಕಡೆವ ಗೋಪಿಯ ಜಡೆ ಪಿಡಿದೆಳೆವ ಎ- ನ್ನೊಡೆಯ ಪುರಂದರವಿಠಲರಾಯನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು