ಸಾಧುಸಜ್ಜನರೊಳಗಿರುವೋದೆ ಹಬ್ಬ

ಸಾಧುಸಜ್ಜನರೊಳಗಿರುವೋದೆ ಹಬ್ಬ

( ರಾಗ ಮಧ್ಯಮಾವತಿ ಆದಿತಾಳ) ಸಾಧುಸಜ್ಜನರೊಳಗಿರುವೋದೆ ಹಬ್ಬ ವೇದಾಂತಧರ್ಮದ ತಿಳಿವೋದೆ ಹಬ್ಬ || ಭೇದಬುದ್ಧಿಗಳೆಲ್ಲ ಬಿಡುವೋದೆ ಹಬ್ಬ ಭಾಗೀರಥಿಲಿ ಲೋಲಾಡುವುದೆ ಹಬ್ಬ || ಸಂಕಲ್ಪಸಿದ್ಧಿ ಮನಕೆ ದೊಡ್ಡ ಹಬ್ಬ ನಿಶ್ಚಿಂತ ಯೋಗಿಗೆ ಅನುದಿನ ಹಬ್ಬ || ಸಾಲವಿಲ್ಲದವನ ಸಂಸಾರದಿ ಹಬ್ಬ ಶರೀರಕ್ಕೆ ವ್ಯಾಧಿ ಬಾರದೊಂದೆ ಹಬ್ಬ || ಸಂಚಿತ ಕರ್ಮವು ಕಳೆವೋದೆ ಹಬ್ಬ ಪಂಚಮುಖನಾಭನ ಭಜಿಸುವುದೆ ಹಬ್ಬ || ಕಂಗಳು ಕಾಶಿಯ ಕಾಂಬೋದೆ ಹಬ್ಬ ಶ್ರೀವಿಶ್ವಪತಿಯ ಭಜಿಸುವುದೆ ಹಬ್ಬ || ಭೂಲೋಕದೊಳು ಕಾಶಿವಾಸವೆ ಹಬ್ಬ ಪುರಂದರವಿಠಲನ್ನ ಭಜಿಸುವುದೆ ಹಬ್ಬ ||
ದಾಸ ಸಾಹಿತ್ಯ ಪ್ರಕಾರ
ಬರೆದವರು