ಶ್ರೀಮಧ್ವರಾಯರ ಸೇವೆ ದೊರಕುವದು

ಶ್ರೀಮಧ್ವರಾಯರ ಸೇವೆ ದೊರಕುವದು

( ರಾಗ ಮೋಹನ. ತ್ರಿಪುಟ ತಾಳ) ಶ್ರೀಮಧ್ವರಾಯರ ಸೇವೆ ದೊರಕುವದು ಜನುಮ ಸಫಲ ಕಾಣಿರೋ ಶ್ರೀಮದಾನಂದತೀರ್ಥರ ಪಾದ ನೆನೆವರು ಸಾಮಾನ್ಯ ಸುರರು ಕಾಣೆ ಬೊಮ್ಮನ ಆಣೆ ||ಪ|| ಜಗವು ಸತ್ಯವ ಅಲ್ಲ ಜಡಜೀವ ಭೇದವಿಲ್ಲ ಅಗುಣನು ಪರ ಬೊಮ್ಮನು ಹೀಗೇ ನುಡಿದ ಜನರ ನಿಗಮ ಶಾಸ್ತ್ರದಿ ಗೆದ್ದು ಜಗ ಸತ್ಯ ಸಗುಣೋದ ಬ್ರಹ್ಮ ಎಂದು ಪೇಳುವ || ಹರಿ ಸರ್ವೋತ್ತಮ ತರುವಾಯ ರಮಾದೇವಿ ಸರಸಿಜಾಸನ ಪ್ರಾಣರು ಸರಸ್ವತೀಭಾರತಿಯೆಂದು ಪೇಳ್ದಾ ಗರುಡಾನಂತ ರುದ್ರ ತರುವಾಯ ಆರು ದೇವಿಗಳು || ಸೌಪರ್ಣಿ ವಾರುಣಿ ಅನಪೂರ್ಣೆಯರು ಸಮರು ದ್ವಿಪದೀಮನ್ವಾದಿ ದೇವಿಗಳು ಈ ಪರಿ ತಾರತಮ್ಯ ಜಪಧ್ಯಾನಾರ್ಚನೆಯಿಂದ ಅಪವರ್ಗಾದಿ ಸೇವೆಯ ಮಾಡಿರೋ ಎಂತೆಂಬ || ಒಂದೊಂದು ಯುಗದಲಿ ಅನಂತ ಸೇವೆಯ ಮಾಡಿ ಚೆಂದದಿಂದಲಿ ಲಾಲಿಸಿ ಇಂದಿರಾರಮಣ ಗೋವಿಂದನೇ ದೈವವೆಂದು ಸಂದೇಹವಿಲ್ಲದೆ ಸಾಧಿಸಿ ಮಾಯಾ ಸೋಲಿಸಿ || ಭೂತದೊಳು ರೌಪ್ಯಪುರದಿ ನೆಲಸಿ ಗೆದ್ದು ಧಾತ್ರೀ ಮುದ್ರೆಯ ತೋರಿಸಿ ಈತನೇ ಹನುಮಂತ ಭೀಮೇಶ ಶ್ರೀಮಧ್ವ ಈತನೇ ಭಾವಿ ಬ್ರಹ್ಮಾ ಜೀವರುತ್ತಮ || ಹಿಮಸೇತುಪರಿಯಂತುದ್ಭವಿಸಿದ ಸುಜನರ್ಗೆ ಕ್ರಮದಿ ತತ್ವವ ಬೋಧಿಸಿ ಕ್ರಮನೇಮಂಗಳ ಮಾಡಿ ಕಮಲನಾಭನ ಮೂರ್ತಿ ಪ್ರೇಮದಿಂದಲಿ ಸ್ಥಾಪಿಸಿ ಪೂಜಿಸಿರೆಂದು || ಶ್ರೀಮದನಂತನೆ ಅನಂತಕಾಲಕೆಯೆಂದು ಯಮಕಭಾರತ ತೋರಿಸಿ ಸ್ವಾಮಿ ಸರ್ವಾಂತರ್ಯಾಮಿ ಸರ್ವಗುಣಪೂರ್ಣನೆಂದು ಪ್ರೇಮಿ ಪುರಂದರವಿಠಲನಾ ದಾಸರಾದನಾ ||
ದಾಸ ಸಾಹಿತ್ಯ ಪ್ರಕಾರ
ಬರೆದವರು