ಶ್ರೀನಿವಾಸನಂಘ್ರಿಸೇವೆ ಮಾಡುವ ಬನ್ನಿ

ಶ್ರೀನಿವಾಸನಂಘ್ರಿಸೇವೆ ಮಾಡುವ ಬನ್ನಿ

( ರಾಗ ಆರಭಿ ಅಟ ತಾಳ) ಶ್ರೀನಿವಾಸನಂಘ್ರಿಸೇವೆ ಮಾಡುವ ಬನ್ನಿ ಧೃಢ ಮತಿಯುಳ್ಳವರು ||ಪ || ಜ್ಞಾನ ಭಕ್ತಿ ವೈರಾಗ್ಯಾದಿ ಜ್ಞಾನವೆಮ್ಮ ನಿರತ ಬರಲು ಧ್ಯಾನಿಸುವ ಸನ್ನಿಧಿಯಲ್ಲಿ ಸಾನುರಾಗದಿಂದ ಪಾಡಿ ||ಅ || ಬಂದ ದುರಿತಗಳನೆಲ್ಲ ದಿನ ದಿನ ತಾನೊಂದು ಗಳಿಗೆ ಹಿಂದು ಮುಂದು ಇಂದು ಹಿತದಿಂದ ಬಂದು ನಿಂದು ಭಯ ತೋರಿದಂತೆ ನಂದನಂದನ ದಿವ್ಯ ಧಿಮಿ ಧಿಮಿ ಧಿಮಿಕೆಂದು ಕುಣಿವ ನಿಂದು ಗೆಜ್ಜೆ ಘಲಿಘಲಿರೆನ್ನೆ ಮಂದಿರದೋಳ್ ಮೋಹಿಸುತ್ತ || ಕಾಮಕ್ರೋದಾಧಿಗಳ ಕಷ್ಟಗಳ ಕಳೆದು ಕೆಡಹಿ ಕಾರುಣ್ಯದಿಂದ ಹೇಮ ಹೆಣ್ಣಿನ ಹಿತವ ಬಿಡಿಸಿ ರಾಮನಾಮ ವ್ರತ ವಾಕ್ಯಗಳ ಸೋಮಶೇಖರ ರಾಣಿ ಸಹಿತ ಪಾಮರಸಂಘದಲಿಹ ಪ್ರೇಮ ಬೇಡವೆಂದು ರಾಮ ನಾಜನ ವರಗಳಿತ್ತ || ಮೂರ್ಜಗದ ಮೂಲಕಾರಣನ ಮುನಿಯ ಮನದಿ ಮಹಾನಿಧಿಯ ಸಾರ್ಜಗದ ಸಭೆಯ ಚೆನ್ನಿಗನ ವಾದೀವುದ ವರವೀವುದಂತೆ ರಾಜಶೇಖರ ರಾಣಿಸಹಿತ ಶ್ರೀಯನಾಥರ ಶಿಷ್ಯ ಸೇರಿ ಪೂ- ರ್ವಜಿತವಾಗಿರಲೆಂದು ರಾಜಿಸುವ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು